ಈ ವರ್ಷ ಸಾಲು ಸಾಲು ಹೊಸ ಫೀಚರ್ಗಳನ್ನು ಬಿಡುಗಡೆ ಮಾಡಲು ಮೆಟಾ ಒಡೆತನದ ವಾಟ್ಸ್ಆ್ಯಪ್ ಮುಂದಾಗಿದೆ.
ಈಗಾಗಲೇ ಅನೇಕ ಅಪ್ಡೇಟ್ಗಳು ಪರೀಕ್ಷಾ ಹಂತದಲ್ಲಿದ್ದು ವಾಟ್ಸ್ಆ್ಯಪ್ ಬೇಟಾ ಇನ್ಫೋ ಒಂದೊಂದೆ ವರದಿ ಮಾಡುತ್ತಿದೆ. ಇದೀಗ ವಾಟ್ಸ್ಆ್ಯಪ್ ಗ್ರೂಪ್ ಕಾಲ್ನಲ್ಲಿ ಬರಲಿರುವ ಹೊಸ ಫೀಚರ್ ತುಂಬಾ ಕುತೂಹಲಕಾರಿಯಾಗಿದ್ದು ಸದ್ಯದಲ್ಲೇ ಬಳಕೆದಾರರಿಗೆ ಸಿಗಲಿದೆಯಂತೆ.
ಟ್ರಸ್ಟಿ ವಾಟ್ಸ್ಆ್ಯಪ್ ಮಾಡಿರುವ ವರದಿಯ ಪ್ರಕಾರ, ವಾಟ್ಸ್ಆ್ಯಪ್ ಗ್ರೂಪ್ ಕಾಲ್ನಲ್ಲಿ ವಿಶೇಷ ಫೀಚರ್ ಒಂದು ಸೇರ್ಪಡೆಯಾಗಲಿದೆಯಂತೆ. ಅಂದರೆ ಗ್ರೂಪ್ ಕಾಲ್ನಲ್ಲಿ ಮಾತನಾಡುತ್ತಿರುವಾಗ ಕರೆಯಲ್ಲಿರುವ ಸದಸ್ಯರು ಯಾರು ಯಾರು ಎಂಬುದು ಚೌಕಾಕಾರದ ಬಾಕ್ಸ್ನಲ್ಲಿ ಕಾಣಿಸಲಿದೆ.
ಇದರ ಕೆಳಬಾಗದಲ್ಲಿ ಮ್ಯೂಟ್, ವಾಲ್ಯೂಮ್, ಕರೆ ಕಟ್ ಮಾಡುವ ಆಯ್ಕೆ ನೀಡಲಾಗಿದೆ. ಆರಂಭದಲ್ಲಿ ಈ ಆಯ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಿಗಲಿದ್ದು, ತದನಂತರ ಐಒಎಸ್ ಬಳಕೆದಾರರಿಗೆ ಸಿಗಲಿದೆ.