Publish Date: Wed, 23 May 2018 (16:49 IST)
Updated Date: Wed, 23 May 2018 (16:53 IST)
ಬೆಂಗಳೂರು: ವಿಧಾನಸೌಧದ ಮುಂಭಾಗ ನಡೆದ ಭವ್ಯ ಕಾರ್ಯಕ್ರಮದಲ್ಲಿ ರಾಜ್ಯದ 25 ನೇ ಮುಖ್ಯಮಂತ್ರಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬಿಳಿ ಪಂಚೆ, ಶರ್ಟ್ ಧರಿಸಿ ಕುಟುಂಬ ಸಮೇತರಾಗಿ ಬಂದಿದ್ದ ಕುಮಾರಸ್ವಾಮಿ ನಗು ನಗುತ್ತಲೇ ವೇದಿಕೆಯಲ್ಲಿದ್ದರು. ದೇವರು ಮತ್ತು ಕನ್ನಡ ನಾಡಿನ ಜನತೆ ಹೆಸರಿನಲ್ಲಿ ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಕಾರ್ಯಕ್ರಮ ಮುಗಿಯುತ್ತಿದ್ದಂತೆ ತಕ್ಷಣ ವೇದಿಕೆಯಿಂದ ಕೆಳಗಿಳಿದ ಕುಮಾರಸ್ವಾಮಿ ನೇರವಾಗಿ ತಮ್ಮ ತಾಯಿ ಚೆನ್ನಮ್ಮ ಕುಳಿತಿದ್ದ ಜಾಗಕ್ಕೆ ಬಂದು ಪತ್ನಿ ಸಮೇತರಾಗಿ ಕಾಲಿಗೆರಗಿ ನಮಸ್ಕರಿಸಿದರು. ಬಳಿಕ ತಂದೆ ಎಚ್ ಡಿ ದೇವೇಗೌಡರ ಕಾಲಿಗೆರಗಲು ನೋಡಿದರೆ ಅವರೇ ಇರಲಿಲ್ಲ.
ತಮ್ಮ ಪುತ್ರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಗಳಿಗೆಯನ್ನು ಕಣ್ತುಂಬಿಕೊಂಡ ದೇವೇಗೌಡರು ಬಂದ ಅತಿಥಿಗಳನ್ನು ಮಾತಾಡಿಸುವಲ್ಲಿ ಬ್ಯುಸಿಯಾಗಿದ್ದರು. ಬಳಿಕ ಅವರನ್ನು ಹುಡುಕಿಕೊಂಡು ಬಂದ ಸಿಎಂ ಕುಮಾರಸ್ವಾಮಿ ಆಶೀರ್ವಾದ ಪಡೆದುಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.