Webdunia - Bharat's app for daily news and videos

Install App

ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ಡಾ.ಡಿ.ವೀರೆಂದ್ರ ಹೆಗ್ಗಡೆ ಹೇಳಿದ್ದೇನು?

Webdunia
ಬುಧವಾರ, 24 ಅಕ್ಟೋಬರ್ 2018 (09:50 IST)
ಮಂಗಳೂರು : ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಬಾರೀ ವಿರೋಧ ವ್ಯಕ್ತವಾಗುತ್ತಿದ್ದು, ಇದೀಗ ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೆಂದ್ರ ಹೆಗ್ಗಡೆ ಪ್ರತಿಕ್ರಿಯೆ ನೀಡಿದ್ದಾರೆ.


ಈ ಬಗ್ಗೆ ಮಾತನಾಡಿದ ಅವರು,’ ಶಬರಿಮಲೆಗೆ ಹೋಗುವುದರಲ್ಲಿ 48 ದಿವಸಗಳ ವ್ರತ ನಿಯಮ ಇದೆ. ಮನೋನಿಗ್ರಹ, ಸಂಯಮದ ಪಾಲನೆ ವ್ರತದ ಹಿನ್ನೆಲೆಯಲ್ಲಿರುತ್ತೆ. ವ್ರತ ನಿಷ್ಠರು ಬ್ರಹ್ಮಚರ್ಯ ಪಾಲಿಸಬೇಕೆಂಬ ನೆಲೆಯಲ್ಲಿ ಮಹಿಳೆಯರು ಮಾಡಿದ ಆಹಾರವನ್ನೂ ಸೇವಿಸುವುದಿಲ್ಲ. ಮಹಿಳೆಯರು ಶಬರಿಮಲೆ ಪ್ರವೇಶವನ್ನು ನಿರ್ಬಂಧಿಸೋದು ಬೇರೆ ವಿಚಾರ. ಆದ್ರೆ ಈ ಸಾಂಪ್ರದಾಯಿಕ ಸೌಂದರ್ಯವನ್ನು ಉಳಿಸಿಕೊಳ್ಳಬೇಕು. ಹಾಗಂತ, ಮಹಿಳೆಯರು ದೇಗುಲಕ್ಕೆ ಹೋಗಬಾರದು ಅಂತಲ್ಲ. ಹೋದ್ರೆ ಏನಾಗುತ್ತೆ ಅನ್ನೋ ಪ್ರಶ್ನೆ ಏಳಬಹುದು. ಹೋದ್ರೆ ಏನೂ ಆಗಲ್ಲ. ಆದ್ರೆ ಅದರ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳಬೇಕು’ ಎಂದು ಹೇಳಿದ್ದಾರೆ.


ಈಗ ಶಬರಿಮಲೆಗೆ ಹೋಗುವ 48 ದಿವಸವನ್ನು 4 ದಿನಕ್ಕೆ ಮಾಡಿದ್ರು. ಅದನ್ನೂ ಬರೀ ಎರಡೇ ದಿವಸಕ್ಕೆ ವೃತ ಹಾಕಿ ಹೋದ್ರೂ ಆಗುತ್ತೆ ಅನ್ನೋದನ್ನು ಯಾರು ಮಾಡಿದ್ರು ಅಂತ ಪ್ರಶ್ನಸಿದ ಅವರು, ಇವೆಲ್ಲವೂ ಪರಿವರ್ತನೆ. ಇದು ತಪ್ಪು. 48 ದಿವಸಗಳ ಕಾಲ ತಣ್ಣೀರಲ್ಲಿ ಸ್ನಾನ ಮಾಡಿ, ಅವನು ಮನೋನಿಗ್ರಹ ಮಾಡಿಕೊಂಡು, ಅವನ ಆಹಾರದಲ್ಲಿ ಪಥ್ಯ ಮಾಡಿಕೊಳ್ಳಬೇಕು. ಈ ಮೂಲಕ ಆತನ ವ್ಯಕ್ತಿತ್ವದಲ್ಲಿ ತೇಜಸ್ಸನ್ನು ಹೆಚ್ಚಿಸಿಕೊಳ್ಳಬೇಕು. ಯಾರೂ 48 ದಿವಸದ ವೃತವನ್ನು ಮಾಡುತ್ತಾರೋ ಅವರಿಗೆ ಅದ್ಭುತವಾದ ತೇಜಸ್ಸು, ಶಕ್ತಿ ಬರುತ್ತದೆ ಅಂತ ಹೇಳಿದ ಅವರು, ಮೂಲ ಉದ್ದೇಶ ಉಳಿಸಿಕೊಂಡರೆ ಒಳ್ಳೆಯದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


‘ಕ್ಷೇತ್ರದ ಮೂಲ ಉದ್ದೇಶ, ಪಾವಿತ್ರ್ಯಕ್ಕೆ ಧಕ್ಕೆ ತರುವಂತಾಗಬಾರದು. ಸಾಂಪ್ರದಾಯಿಕ ಆಚರಣೆ ಕ್ಷೇತ್ರಕ್ಕೊಂದು ಸೌಂದರ್ಯ. ಇಂಥ ನಿಷೇಧ ಪದ್ಧತಿ ವಿದೇಶಗಳಲ್ಲೂ ಇರುವುದನ್ನು ಕಂಡಿದ್ದೇನೆ. ಭಕ್ತಿಯಿದ್ದರೆ ಕ್ಷೇತ್ರಕ್ಕೇ ಹೋಗಬೇಕಾಗಿಲ್ಲ. ಮನೆಯಲ್ಲಿಯೂ ದೇವರ ಆರಾಧನೆ ಮಾಡಬಹುದು ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments