ಜಿನೇವಾ : ಕೊರೊನಾ ವೈರಸ್ ರೂಪಾಂತರಿ ತಳಿ ಓಮಿಕ್ರಾನ್ ಸೋಂಕು ಜನತೆಯಲ್ಲಿ ಮತ್ತೆ ಭಯ ಹುಟ್ಟಿಸಿದೆ
2022ರಲ್ಲಿ ನಾವು ಕೊರೊನಾ ಸಾಂಕ್ರಾಮಿಕವನ್ನು ಸಂಪೂರ್ಣವಾಗಿ ಕೊನೆಗಾಣಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಡಾನೊಮ್ ಗೆಬ್ರೆಯೆಸಸ್ ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೆಡ್ರೋಸ್, ಎರಡನೇ ಬಾರಿಯೂ ಕೋವಿಡ್ ನೆರಳಿನಲ್ಲೇ ಕ್ರಿಸ್ಮಸ್ ಆಚರಿಸುವಂತಾಗಿದೆ. ಕೊರೊನಾ ಸಾಂಕ್ರಾಮಿಕವನ್ನು ಕೊನೆಗಾಣಿಸಲು ವಿಶ್ವದ ಎಲ್ಲಾ ಸರ್ಕಾರಗಳು ಒಂದಾಗಿ ಕೆಲಸ ಮಾಡಬೇಕು. 2022ರಲ್ಲಿ ನಾವು ಸಂಪೂರ್ಣವಾಗಿ ಕೋವಿಡ್ಗೆ ಅಂತಿಮ ಹಾಡಬೇಕು ಎಂದು ತಿಳಿಸಿದ್ದಾರೆ.
ಮುಂದಿನ ವರ್ಷದಲ್ಲಿ ಕೊರೊನಾ ಸಾಂಕ್ರಾಮಿಕ ಕೊನೆಗಾಣಿಸಬೇಕಾದರೆ, 2022ರ ಮಧ್ಯಭಾಗದ ಹೊತ್ತಿಗೆ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ. 70 ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಈವರೆಗೆ 9 ಕೋವಿಡ್ ಲಸಿಕೆಗಳ ತುರ್ತು ಬಳಕೆಗೆ ಡಬ್ಲ್ಯೂಎಚ್ಒ ಅನುಮೋದನೆ ನೀಡಿದೆ. ಭಾರತದ ಸೀರಮ್ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿರುವ ಕೊವೊವ್ಯಾಕ್ಸ್ ಲಸಿಕೆಗೂ ಅನುಮೋದನೆ ನೀಡಲಾಗಿದೆ. ಈ ಲಸಿಕೆಯು ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.