Webdunia - Bharat's app for daily news and videos

Install App

ವೀಸಾ ಅಮಾನತುಗೊಳಿಸಿದ ಭಾರತ!

Webdunia
ಸೋಮವಾರ, 25 ಏಪ್ರಿಲ್ 2022 (12:18 IST)
ನವದೆಹಲಿ : ಚೀನಾದ ಪ್ರಜೆಗಳಿಗೆ ನೀಡಲಾಗಿದ್ದ ಪ್ರವಾಸಿ ವೀಸಾವನ್ನು ಭಾರತ ಅಮಾನತುಗೊಳಿಸಿದೆ ಎಂದು ಜಾಗತಿಕ ವಿಮಾನಯಾನ ಸಂಸ್ಥೆಯ ಇಂಟರ್ನ್ಯಾಶನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್  ತಿಳಿಸಿದೆ.

ಚೀನಾದ ವಿಶ್ವವಿದ್ಯಾನಿಲಯಗಳಲ್ಲಿ ದಾಖಲಾದ ಸುಮಾರು 22,000 ಭಾರತೀಯ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಿಂತಿರುಗಲು ಸಾಧ್ಯವಾಗದ ಬಗ್ಗೆ ಭಾರತದ ಮನವಿಗಳಿಗೆ ಬೀಜಿಂಗ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನೆರೆಯ ದೇಶವು ಇಲ್ಲಿಯವರೆಗೆ ಅವರನ್ನು ಪ್ರವೇಶಿಸಲು ನಿರಾಕರಿಸಿದೆ. 2020 ರ ಆರಂಭದಲ್ಲಿ ಕೊರೊನಾ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ ಈ ವಿದ್ಯಾರ್ಥಿಗಳು ಚೀನಾದಲ್ಲಿ ತಮ್ಮ ಅಧ್ಯಯನ ತೊರೆದು ಭಾರತಕ್ಕೆ ಬಂದಿದ್ದರು. 

ಭಾರತಕ್ಕೆ ಸಂಬಂಧಿಸಿದಂತೆ ಹೊರಡಿಸಲಾದ ಸುತ್ತೋಲೆಯಲ್ಲಿ, ಚೀನಾ ಪ್ರಜೆಗಳಿಗೆ ನೀಡಲಾದ ಪ್ರವಾಸಿ ವೀಸಾಗಳು ಇನ್ನು ಮುಂದೆ ಮಾನ್ಯವಾಗಿಲ್ಲ ಎಂದು ಐಎಟಿಎ ಹೇಳಿದೆ. ಭೂತಾನ್, ಮಾಲ್ಡೀವ್ಸ್, ನೇಪಾಲ್ ಪ್ರಜೆಗಳು ಭಾರತಕ್ಕೆ ಪ್ರವಾಸ ಕೈಗೊಳ್ಳಬಹುದು ಎಂದು ತಿಳಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments