Publish Date: Thu, 10 Mar 2022 (09:58 IST)
Updated Date: Thu, 10 Mar 2022 (10:30 IST)
ನವದೆಹಲಿ : ಇಂದು ಪಂಚರಾಜ್ಯ ಚುನಾವಣೆ ಫಲಿತಾಂಶ. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಕಾತರರಾಗಿದ್ದಾರೆ.
ಎಕ್ಸಿಟ್ ಪೋಲ್ ಬಳಿಕ ಎಲ್ಲರೂ ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, 11-12 ಗಂಟೆ ಹೊತ್ತಿಗೆ ಫಲಿತಾಂಶದ ಒಂದು ಚಿತ್ರಣ ಸಿಗಬಹುದು.
ಜನಸಂಖ್ಯೆ ಮತ್ತು ರಾಜಕೀಯದ ದೃಷ್ಟಿಯಿಂದ ಉತ್ತರ ಪ್ರದೇಶ ತುಂಬಾನೇ ಮುಖ್ಯವಾದುದು. 403 ಎಂಎಲ್ಎ, 80 ಎಂಪಿ, 31 ರಾಜ್ಯಸಭೆ ಸೀಟ್ ಹೊಂದಿರುವ ಉತ್ತರಪ್ರದೇಶದಲ್ಲಿ ಗೆದ್ದರೆ ದೆಹಲಿ ಗದ್ದುಗೆ ಸುಲಭ.
ಒಂದರ್ಥದಲ್ಲಿ ದೆಹಲಿ ಸೇರಲು ಉತ್ತರಪ್ರದೇಶ ಹೆದ್ದಾರಿ ಎಂದು ಪರಿಗಣಿಸಲಾಗುತ್ತದೆ. ಸದ್ಯ ಇಲ್ಲಿ ಬಿಜೆಪಿ ಸರ್ಕಾರವಿದೆ. ವಿಪಕ್ಷ ಎಸ್ಪಿ ಗದ್ದುಗೆ ಏರುವ ಕನಸು ಕಾಣುತ್ತಿದೆ. ಆದರೆ ನಿನ್ನೆ ರಾತ್ರಿ ನಡೆದ ಕೆಲವೊಂದಿಷ್ಟು ಬೆಳವಣಿಗೆಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ.