ರಾಜ್ಯದಲ್ಲಿ ಮತ್ತೆ ಮೂರು ದಿನ ಮಳೆ!

Webdunia
ಬುಧವಾರ, 15 ಡಿಸೆಂಬರ್ 2021 (10:15 IST)
ಕಳೆದ ಎರಡು ವಾರದಿಂದ ವಿರಾಮ ನೀಡಿದ್ದ ಮಳೆರಾಯ ಮತ್ತೆ ರಾಜ್ಯಕ್ಕೆ ಎಂಟ್ರಿ ಕೊಡಲಿದ್ದಾನೆ. ಡಿಸೆಂಬರ್ 17ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ.
 
ಸಾಧಾರಣ ಮಳೆಯಾದ್ರೂ ರೈತ ವರ್ಗಕ್ಕೆ ಹೊಡೆತ ನೀಡಲಿದೆ. ಚಳಿಗಾಲದಲ್ಲಿಯ ಆಕಾಲಿಕ ಮಳೆ ಬೆಳೆಯನ್ನು ಹಾಳು ಮಾಡುವ ಮೂಲಕ ಇಳುವರಿಯನ್ನು ಕುಂಠಿತಗೊಳಿಸುತ್ತದೆ.

ಮುಂದಿನ 5 ದಿನಗಳಲ್ಲಿ ತಮಿಳುನಾಡು-ಪುದುಚೇರಿ-ಕಾರೈಕಲ್, ಕೇರಳ- ಮಾಹೆ, ಲಕ್ಷದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮತ್ತು ಮುಂದಿನ 2 ದಿನಗಳಲ್ಲಿ ದಕ್ಷಿಣ ಆಂಧ್ರಪ್ರದೇಶದಲ್ಲಿ ಪ್ರತ್ಯೇಕ/ಚದುರಿದ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇನ್ನು ರಾಜಧಾನಿ ಬೆಂಗಳೂರಿನಲ್ಲಂತೂ ಮಳೆ  ಸಂಪೂರ್ಣ ಪೂರ್ಣ ವಿರಾಮವನನ್ನೇ ನೀಡಿಲ್ಲ. ಆಗಾಗ ಮಳೆಯ ಸಿಂಚನ ನಗರದಲ್ಲಿ ಆಗುತ್ತಿದ್ದು, ಚುಮು ಚುಮು ಚಳಿಯಲ್ಲಿ ತಂಪಾದ ಹಿತವನ್ನು ನೀಡುತ್ತಿದೆ. ಬೆಳಗಿನ ಜಾವ ಮತ್ತು ಸಂಜೆಯಾಗುತ್ತಿದ್ದಂತೆ ಬೀಸುವ ಸುಳಿಗಾಳಿಗೆ ಜನರು ಮನೆಯಿಂದ ಹೊರ ಬರದಂತೆ ತಡೆಯುತ್ತಿದೆ, ಇಂದು ಬೆಂಗಳೂರಿನಲ್ಲಿ ಗರಿಷ್ಠ 26 ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊನೆಗೂ ಯುಜಿಸಿ ಹೊಸ ನಿಯಮಕ್ಕೆ ಬ್ರೇಕ್ ಹಾಕಿದ ಸುಪ್ರೀಂಕೋರ್ಟ್

ಕಾಂಗ್ರೆಸ್ಸಿನವರಿಗೆ ಮಹಾತ್ಮ ಗಾಂಧಿಯವರ ಬಗ್ಗೆ ಮಾತನಾಡುವ ಯಾವುದೇ ಯೋಗ್ಯತೆ ಇಲ್ಲ: ವಿಜಯೇಂದ್ರ

ಪತ್ರಿಕೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಜಾಹೀರಾತು: ಸಿಟಿ ರವಿ ಆಕ್ರೋಶ

ಅನಂತ ಸುಬ್ಬರಾವ್ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಯುಜಿಸಿ ಹೊಸ ನಿಯಮ ಎಂದರೇನು, ಇದರ ವಿರುದ್ಧ ಪ್ರತಿಭಟನೆಗಳು ಯಾಕಾಗ್ತಿವೆ

ಮುಂದಿನ ಸುದ್ದಿ
Show comments