Select Your Language

Notifications

webdunia
webdunia
webdunia
webdunia

ಚಿಕನ್ ಗುನ್ಯಾ ಲಸಿಕೆಯ ಮೂರನೇ ಹಂತ ಯಶಸ್ವಿ

ಚಿಕನ್ ಗುನ್ಯಾ
ನವದೆಹಲಿ , ಶನಿವಾರ, 17 ಜೂನ್ 2023 (10:45 IST)
ಸೊಳ್ಳೆಗಳಿಂದ ಹರಡುವ ಅಪಾಯಕಾರಿ ಕಾಯಿಲೆಗಳಲ್ಲಿ ಚಿಕನ್ ಗುನ್ಯಾ ಕೂಡಾ ಒಂದು. ಪ್ರತಿ ವರ್ಷ ಅನೇಕ ಜನರು ಈ ರೋಗಕ್ಕೆ ತುತ್ತಾಗುತ್ತಾರೆ. ಪ್ರಸ್ತುತ ಚಿಕನ್ ಗುನ್ಯಾದಿಂದ ಉಂಟಾಗುವ ರೋಗವನ್ನು ತಡೆಗಟ್ಟಲು ಯಾವುದೇ ಲಸಿಕೆ ಇಲ್ಲ.
 
ಅಲ್ಲದೆ ಈ ಕಾಯಿಲೆಗೆ ಯಾವುದೇ ಪರಿಣಾಮಕಾರಿ ಅಂಟಿವೈರಲ್ ಚಿಕಿತ್ಸೆ ಕೂಡಾ ಇಲ್ಲ. ಈ ಮಾರಣಾಂತಿಕ ಕಾಯಿಲೆಯಿಂದ ಜನರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸದ್ಯದಲ್ಲೇ ಲಸಿಕೆ ಬರುವ ಸಾಧ್ಯತೆಯಿದೆ.

ಲಸಿಕೆಯ ಮೂರನೇ ಹಂತದ ಪ್ರಯೋಗ ಯಶಸ್ವಿಯಾಗಿದ್ದು, ಪ್ರಯೋಗದಲ್ಲಿ ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಘೋಷಿಸಲಾಗಿದೆ. ಫ್ರೆಂಚ್ನ ಬಯೋಟೆಕ್ ಕಂಪೆನಿ ವೆಲ್ನೆವಾ ಈ ಲಸಿಕೆಯನ್ನು ತಯಾರಿಸುತ್ತಿದೆ. ಈ ಲಸಿಕೆ ಒಂದೇ ಡೋಸ್ ನಲ್ಲಿರುತ್ತದೆ. ಕಂಪೆನಿಯು 3ನೇ ಹಂತದ ಪ್ರಯೋಗದ ಫಲಿತಾಂಶವನ್ನು ಲ್ಯಾನ್ಸೆಟ್ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ಮಾಡಿದರೂ ಅಕ್ಕಿ ಗ್ಯಾರಂಟಿ : ಸಿದ್ದರಾಮಯ್ಯ