Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರಿಯೆಯಿಂದ ಹರಡುತ್ತೆ ಸೋಂಕು! ತಜ್ಞರು ಹೇಳೋದೇನು?

ಲೈಂಗಿಕ ಕ್ರಿಯೆಯಿಂದ ಹರಡುತ್ತೆ ಸೋಂಕು!  ತಜ್ಞರು ಹೇಳೋದೇನು?
ನವದೆಹಲಿ , ಬುಧವಾರ, 27 ಜುಲೈ 2022 (10:22 IST)
ನವದೆಹಲಿ :  ಮಂಕಿಪಾಕ್ಸ್ ಸೋಂಕು ತಗುಲಿರುವವರೊಂದಿಗೆ ಸಂಕರ್ಪ ಹೊಂದದರೆ ಅವರಿಗೂ ಸೋಂಕು ಹರಡಲಿದೆ.

ಚುಂಬಿಸುವುದು, ಸ್ಪರ್ಷಿಸುವುದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಸೋಂಕು ಹರಡಲಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ. 

WHO ಪ್ರಕಾರ ದದ್ದುಗಳು, ದೇಹದ ದ್ರವ (ದ್ರವ, ಕೀವು ಅಥವಾ ಚರ್ಮದ ಗಾಯಗಳಿಂದ ಬರುವ ರಕ್ತ) ಮತ್ತು ಹುರುಪುಗಳು ಇತರರಿಗೂ ಸೋಂಕು ಹರಡುತ್ತವೆ.

ಲಾಲಾರಸದ ಮೂಲಕ ವೈರಸ್ ಹರಡುವುದರಿಂದ ಹುಣ್ಣುಗಳು, ಗಾಯಗಳು ಸಹ ಸಾಂಕ್ರಾಮಿಕವಾಗಬಹುದು. ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರುವ ವಸ್ತುಗಳು (ಬಟ್ಟೆ, ಹಾಸಿಗೆ, ಟವೆಲ್, ಅಡುಗೆ ಪಾತ್ರೆಗಳು) ವಸ್ತುಗಳು ಸಹ ಸೋಂಕಿನ ಮೂಲವಾಗಿರಬಹುದು.

ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯ ಡಾ. ಧೀರೇನ್ ಗುಪ್ತಾ, ಲೈಂಗಿಕ ಸಂಪರ್ಕದ ಸಮಯದಲ್ಲಿ ಮಂಕಿಪಾಕ್ಸ್ ಹರಡುವಿಕೆ ಹೆಚ್ಚಾಗುತ್ತದೆ.

ಇದು ನಿಕಟ ಸಂಪರ್ಕದ ಸಮಯದಲ್ಲಿ ಸಂಭವಿಸಬಹುದು. ತಬ್ಬಿಕೊಳ್ಳುವುದು, ಮಸಾಜ್ ಮಾಡುವುದು ಮತ್ತು ಚುಂಬಿಸುವುದು ಮತ್ತು ದೀರ್ಘಾವಧಿಯ ಮುಖಾಮುಖಿ ಸಂಪರ್ಕವು ವೈರಸ್ ಹರಡುವಿಕೆಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ತಾಯಿ ಓದುವಂತೆ ಒತ್ತಾಯಿಸುತ್ತಿದ್ದಕ್ಕೆ ಮಗಳು ಏನ್ ಮಾಡುದ್ಲು ನೋಡಿ!?