Select Your Language

Notifications

webdunia
webdunia
webdunia
webdunia

ಸಾರಾ ಅಬೂಬಕರ್ ಸಹೋದರನ ಪುತ್ರಿ ಪೊಲೆಂಡ್ ದೇಶದ ಭಾರತೀಯ ರಾಯಭಾರಿ

ಸಾರಾ ಅಬೂಬಕರ್ ಸಹೋದರನ ಪುತ್ರಿ ಪೊಲೆಂಡ್ ದೇಶದ ಭಾರತೀಯ ರಾಯಭಾರಿ
ಕಾಸರಗೋಡು , ಭಾನುವಾರ, 19 ಸೆಪ್ಟಂಬರ್ 2021 (11:25 IST)
ಕಾಸರಗೋಡು : ಕಾಸರಗೋಡು ಮೂಲದ ಐಎಫ್ ಎಸ್ ಅಧಿಕಾರಿ ನಗ್ಮಾ ಮೊಹಮದ್ ಮಲಿಕ್ ಪೊಲೆಂಡ್ ಮತ್ತು ಲಿಥುವೇನಿಯ ದೇಶಗಳಿಗೆ ಭಾರತೀಯ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
Photo Courtesy: Google

1991 ಬ್ಯಾಚಿನಲ್ಲಿ ಉತ್ತೀರ್ಣರಾದ ನಗ್ಮಾ ಅವರು ಐ ಎಫ್ ಎಸ್ ಅಧಿಕಾರಿಯಾಗಿ ಆಯ್ಕೆಯಾದ ಮೊದಲ ಮಹಿಳಾ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾದವರು.
ನಗ್ಮಾ ಅವರ ಸಾಧನೆ ಕುರಿತು ಕನ್ನಡಿಗರು ಹೆಮ್ಮೆ ಪಡಬೇಕಾದ ವಿಚಾರ ಮತ್ತೊಂದಿದೆ. ಈಕೆ ಕನ್ನಡದ ಖ್ಯಾತ ಮಹಿಳಾ ಸಾಹಿತಿ ಸಾರಾ ಅಬೂಬಕರ್ ಅವರ ಸಹೋದರನ ಮಗಳು. ಅವರು ಪೊಲೆಂಡ್ ದೇಶದ ಭಾರತೀಯ ರಾಯಭಾರಿಯಾಗಿ ಆಯ್ಕೆಯಾಗಿರುವುದರಿಂದ ಮಂಗಳೂರು ಮತ್ತು ಕಾಸರಗೋಡಿನಲ್ಲಿ ನೆಲೆಸಿರುವ ಅವರ ಸಂಬಂಧಿಕರು ಸಂತಸಗೊಂಡಿದ್ದಾರೆ.
ಈ ಹಿಂದೆ ನಗ್ಮಾ ಅವರು ವಿದೇಶಾಂಗ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೊಹಮದ್ ಹಬೀಬುಲ್ಲ ಮತ್ತು ಜುಲು ಅವರ ಪುತ್ರಿಯಾಗಿರುವ ನಗ್ಮಾ ಆವರು ಕಾಸರಗೋಡು ಮೂಲದವರಾದರೂ ಓದಿದ್ದು ಬೆಳೆದಿದ್ದು ಎಲ್ಲಾ ನವದೆಹಲಿಯಲ್ಲಿ. ಅವರು ಇಂಗ್ಲಿಶ್ ಸಾಹಿತ್ಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ


Share this Story:

Follow Webdunia kannada

ಮುಂದಿನ ಸುದ್ದಿ

ಭಾಸ್ಕರ್ ರಾವ್ ಮನವೊಲಿಸುವಂತೆ ಸಿಎಂಗೆ ಗಡಿ ಹೋರಾಟ ಸಮಿತಿ ಒತ್ತಾಯ