Publish Date: Mon, 15 May 2023 (12:03 IST)
Updated Date: Mon, 15 May 2023 (12:30 IST)
ನವದೆಹಲಿ : ನಿಮ್ಮ ಕಳೆದು ಹೋದ ಮೊಬೈಲ್ ಅನ್ನು ಟ್ರ್ಯಾಕ್ ಮಾಡಲು ಹಾಗೂ ಇತರರು ಆ ಫೋನ್ಗೆ ಪ್ರವೇಶ ಪಡೆಯುವುದನ್ನು ನಿರ್ಬಂಧಿಸಲು ಸರ್ಕಾರ ಶೀಘ್ರವೇ ಹೊಸ ಟ್ರ್ಯಾಕಿಂಗ್ ಸಿಸ್ಟಮ್ ಅನ್ನು ಹೊರ ತರಲಿದೆ.
ಟೆಲಿಮ್ಯಾಟಿಕ್ಸ್ ಇಲಾಖೆ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಯು ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಮತ್ತು ಈಶಾನ್ಯ ಪ್ರದೇಶಗಳು ಸೇರಿದಂತೆ ಕೆಲವು ಟೆಲಿಕಾಂ ವಲಯಗಳಲ್ಲಿ ಸಿಇಐಆರ್ ಸಿಸ್ಟಮ್ನ ಪ್ರಯೋಗವನ್ನು ನಡೆಸುತ್ತಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.