Webdunia - Bharat's app for daily news and videos

Install App

ಶಿಕ್ಷಕರ ನೇಮಕಾತಿ : ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ

Webdunia
ಶನಿವಾರ, 19 ನವೆಂಬರ್ 2022 (09:51 IST)
ಬೆಂಗಳೂರು : ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಸಮಗ್ರ ಶಿಕ್ಷಣ ಕಚೇರಿಯಲ್ಲಿ ಸಚಿವ ಬಿ.ಸಿ.ನಾಗೇಶ್ ಅವರು ಶುಕ್ರವಾರ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಮಾಡಿದ್ದೇವೆ. 1:1 ಆಧಾರದಲ್ಲಿ ಪಟ್ಟಿ ರಿಲೀಸ್ ಮಾಡಲಾಗಿದೆ. ಎಲ್ಲರ ಆರೋಪಕ್ಕೆ ಇವತ್ತು ಉತ್ತರ ನೀಡಿದ್ದೇವೆ. ಅತ್ಯುತ್ತಮವಾಗಿ ಪರೀಕ್ಷೆ ನಡೆಸಿ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

15 ಸಾವಿರ ಶಿಕ್ಷಕರ ನೇಮಕಾತಿಗೆ ಪರೀಕ್ಷೆ ಮಾಡಿದ್ದೆವು. 13,363 ಜನ 1:1 ಆಧಾರದಲ್ಲಿ ಅಭ್ಯರ್ಥಿಗಳು ಪಟ್ಟಿಯಲ್ಲಿ ಇದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ 5 ಸಾವಿರ ಹುದ್ದೆ ಇಟ್ಟಿದ್ದೇವೆ. ಆದ್ರೆ ಅಲ್ಲಿ ಸ್ವಲ್ಪ ಕೊರತೆ ಆಗಿದೆ.
5 ಸಾವಿರ ಹುದ್ದೆ ಪೈಕಿ 4,187 ಪಟ್ಟಿ ರಿಲೀಸ್ ಆಗಿದೆ (ಕಲ್ಯಾಣ ಕರ್ನಾಟಕ). ಉಳಿದ ಭಾಗದಲ್ಲಿ 9,176 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು https://schooleducation.kar.nic.inವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕ್ಯಾಪ್ಟನ್ ಅಭಿಮನ್ಯುಗೆ ರಾಜೋಚಿತ ಬೀಳ್ಕೋಡುಗೆ ನೀಡಲು ಹೆಚ್ಚಿದ ಒತ್ತಡ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 50:50 ಅನುಪಾತದಡಿ ನಿವೇಶನ ಪಡೆದಿದ್ದವರಿಗೆ ರಾಜ್ಯ ಸರ್ಕಾರ ಬಿಗ್‌ ಶಾಕ್‌

ಅಂಬಾರಿಯಿಂದ ಕ್ಯಾಪ್ಟನ್ ಅಭಿಮನ್ಯು ಈ ಬಾರಿ ಹೊರಗಿಡದಂತೆ ರಾಮಲಿಂಗಾರೆಡ್ಡಿಗೆ ಈಶ್ವರ್ ಖಂಡ್ರೆ ಪತ್ರ

ಮುಖ್ಯಮಂತ್ರಿಗಳು ಹೊಣೆ ಹೊರುವವರೆಗೂ ಹೇಳಿಕೆ ನೀಡುವುದಿಲ್ಲ: ತೇಜಸ್ವಿ ಯಾದವ್ ಮೊದಲ ರಿಯಾಕ್ಷನ್

ಸರ್ಕಾರಕ್ಕೆ ಮಾನ, ಮರ್ಯಾದೆ ಇದ್ದರೆ ನಾಗೇಂದ್ರ ರಾಜೀನಾಮೆ ಪಡೆಯಲಿ: ವಿಜಯೇಂದ್ರ

ಮುಂದಿನ ಸುದ್ದಿ
Show comments