ಭೂ ವೀಕ್ಷಣಾ ಉಪಗ್ರಹ ಯಶಸ್ವಿ ಉಡಾವಣೆ

Webdunia
ಸೋಮವಾರ, 14 ಫೆಬ್ರವರಿ 2022 (13:35 IST)
ಶ್ರೀಹರಿಕೋಟ : ಭಾರತೀಯ ಬಾಹ್ಯಾಕಾಶ ಹಾಗೂ ಸಂಶೋಧನಾ ಸಂಸ್ಥೆ(ಇಸ್ರೋ) ಸೋಮವಾರ ಮುಂಜಾನೆ ಭೂ ವೀಕ್ಷಣಾ ಉಪಗ್ರಹ ಸಿ52 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮುಂಜಾನೆ 5:59ಕ್ಕೆ ಸರಿಯಾಗಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಪಿಎಸ್ಎಲ್ವಿ) ರಾಕೆಟ್ ಮೂಲಕ ಉಪಗ್ರಹವನ್ನು ಹಾರಿಸಲಾಗಿದೆ.

EOS -04 ರೇಡಾರ್ ಇಮೇಜಿಂಗ್ ಉಪಗ್ರಹವಾಗಿದ್ದು ಕೃಷಿ, ಅರಣ್ಯ, ತೋಟಗಳು, ಮಣ್ಣಿನ ತೇವಾಂಶ, ಜಲವಿಜ್ಞಾನ ಹಾಗೂ ಪ್ರವಾಹ ಮ್ಯಾಪಿಂಗ್ನಂತಹ ಅಪ್ಲಿಕೇಶನ್ಗಳಿಗೆ ಯಾವುದೇ ಹವಾಮಾನ ಪರಿಸ್ಥಿತಿಗಳಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆಯುವಂತೆ ಅಭಿವೃದ್ಧಿಪಡಿಸಲಾಗಿದೆ. 

EOS -04 ಉಪಗ್ರಹದೊಂದಿಗೆ ಎರಡು ಚಿಕ್ಕ ಉಪಗ್ರಹಗಳನ್ನು ಉಡಾಯಿಸಿದ್ದು, ಇದನ್ನು ಬಾಹ್ಯಾಕಾಶ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ತಯಾರಿಸಿದ್ದಾರೆ. INSPIREsat -1 ಎಂದು ಕರೆಯಲಾಗುವ ಉಪಗ್ರಹ 8.1 ಕೆಜಿ ತೂಕವಿದೆ. ಇದು ಸೂರ್ಯನ ಶಾಖದ ಕ್ರಿಯೆಯ ಬಗ್ಗೆ ಮಾಹಿತಿ ತಿಳಿಸಲಿದ್ದು, ಇದರ ಜೀವಿತಾವಧಿ 1 ವರ್ಷ ಇರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ವೀಟ್ ಖರೀದಿಸಿದ ರಾಹುಲ್ ಗಾಂಧಿಗೆ ಶಾಕಿಂಗ್ ಬೇಡಿಕೆಯಿಟ್ಟ ಅಂಗಡಿ ಮಾಲೀಕ

ನಕ್ಸಲಿಸಂ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದಿಟ್ಟ ಉತ್ತರ

ಪತ್ನಿ ಕೃತಿಕಾ ರೆಡ್ಡಿ ಹತ್ಯೆ ಬಗ್ಗೆ ಕೊನೆಗೂ ಸ್ಪೋಟಕ ಸತ್ಯ ಬಾಯ್ಬಿಟ್ಟ ಡಾ ಮಹೇಂದ್ರ ರೆಡ್ಡಿ

ಓಲಾ ಕಂಪೆನಿ ಎಂಜಿನಿಯರ್ ಅನುಮಾನಸ್ಪದ ಸಾವು, 28ಪುಟಗಳ ಡೆತ್‌ನೋಟ್‌ನಲ್ಲಿತ್ತು ಶಾಕಿಂಗ್ ಸಂಗತಿ

ಪ್ರತಿ ವರ್ಷದಂತೆ ಈ ಬಾರಿಯೂ ದೀಪಾವಳಿಗೆ ಈ ಕೆಲಸ ಮಾಡಲು ಮರೆಯದ ನರೇಂದ್ರ ಮೋದಿ

ಮುಂದಿನ ಸುದ್ದಿ
Show comments