Select Your Language

Notifications

webdunia
webdunia
webdunia
webdunia

ಚಂದ್ರನಿಗೆ ಅಪ್ಪಳಿಸಲಿದ ರಾಕೆಟ್! ಮುಂದೇನಾಯ್ತು?

ಚಂದ್ರನಿಗೆ ಅಪ್ಪಳಿಸಲಿದ  ರಾಕೆಟ್! ಮುಂದೇನಾಯ್ತು?
ವಾಷಿಂಗ್ಟನ್ , ಗುರುವಾರ, 27 ಜನವರಿ 2022 (12:08 IST)
ವಾಷಿಂಗ್ಟನ್ : ಏಳು ವರ್ಷಗಳ ಹಿಂದೆ ಉಡಾವಣೆಯಾದ ಸ್ಪೇಸ್ಎಕ್ಸ್ ರಾಕೆಟ್ ಮಾರ್ಚ್ ತಿಂಗಳಿನಲ್ಲಿ ಚಂದ್ರನಿಗೆ ಅಪ್ಪಳಿಸಲಿದೆ ಎಂದು ಖಗೋಳಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.

ಫೆಬ್ರವರಿ 2015 ರಲ್ಲಿ ಅಂತರಗ್ರಹ ಕಾರ್ಯಾಚರಣೆಯ ಭಾಗವಾಗಿ ಉಡಾವಣೆಯಾದ ಫಾಲ್ಕನ್ 9 ಬೂಸ್ಟರ್ ರಾಕೆಟ್ ಇಂಧನ ಖಾಲಿಯಾಗಿ ಕಕ್ಷೆಯಲ್ಲಿ ಅಸ್ತವ್ಯಸ್ತವಾಗಿ ಸುತ್ತುತ್ತಿದೆ.

ಈಗ ನಾಲ್ಕು ಟನ್ ತೂಕದ ಸೆಕೆಂಡ್ಗೆ 2.58 ಕಿ.ಮೀ ವೇಗದಲ್ಲಿ ಸಂಚರಿಸುವ ರಾಕೆಟ್ ಚಂದ್ರನನ್ನು ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ. 

ಯಾವುದೇ ಉದ್ದೇಶವಿಲ್ಲದೇ ಬಾಹ್ಯಾಕಾಶದ ಕಸವೊಂದು ಚಂದ್ರನ ಮೇಲೆ ಅಪ್ಪಳಿಸುತ್ತಿರುವುದು ಇದೇ ಮೊದಲು. ಅಪ್ಪಳಿಸಿದ ನಂತರ ಸೃಷ್ಟಿಯಾಗುವ ಕುಳಿಯ ಬಗ್ಗೆ ತಿಳಿಯುವ ವೈಜ್ಞಾನಿಕ ಕುತೂಹಲ ಹೆಚ್ಚಾಗಿದೆ ಎಂದು ಬಿಲ್ ಗ್ರೇ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ತಾಯಿಗೆ ಔಷಧ ತರಲು ಸಹಾಯ ಕೇಳಿಬಂದ ಅಪ್ರಾಪ್ತೆಯ ಮೇಲೆ ನೆರೆಮನೆಯವನಿಂದ ಅತ್ಯಾಚಾರ