Webdunia - Bharat's app for daily news and videos

Install App

ವಿಧಾನ ಮಂಡಲ ಅಧಿವೇಶನದ ಮೊದಲ ದಿನದ ವಿಶೇಷತೆಗಳು!

Webdunia
ಮಂಗಳವಾರ, 14 ಸೆಪ್ಟಂಬರ್ 2021 (11:15 IST)
ಬೆಂಗಳೂರು, ಸೆ. 14: ಹಲವು ವೈಶಿಷ್ಟ್ಯಗಳೊಂದಿಗೆ ಹತ್ತು ದಿನಗಳ ಕಾಲ ನಡೆಯಲಿರುವ ವಿಧಾನ ಮಂಡಲ ಮಳೆಗಾಲದ ಅಧಿವೇಶನ ಸೋಮವಾರ ಆರಂಭವಾಗಿದೆ. ಕಳೆದ ಬಾರಿಯ ಅಧಿವೇಶನದಲ್ಲಿ ಮೊಟ್ಟ ಮೊದಲ ಸೀಟಲ್ಲಿ ಕುಳಿತಿದ್ದ ಯಡಿಯೂರಪ್ಪನವರಿಗೆ ಈ ಬಾರಿ ಕೊನೆಯ ಸಾಲಿನಲ್ಲಿ ಕುಳಿತು ಕಲಾಪದಲ್ಲಿ ಭಾಗಿಯಾಗಿದ್ದರು.
Photo Courtesy: Google

ಜೊತೆಗೆ ಕಳೆದ ಬಾರಿಯ ಅಧಿವೇಶನದಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್ ಅವರೂ ಕೂಡ ಹಿಂದಿನ ಸಾಲಿಗೆ ಸ್ಥಳಾಂತರವಾಗಿದ್ದಾರೆ. ಇದರೊಂದಿಗೆ ಸದನದಲ್ಲಿ ಹೊಸ ಸಚಿವರ ಸಂಭ್ರಮ ಕಂಡು ಬಂತು. ಅದರಲ್ಲಿಯೂ ಸಚಿವರಾದ ಮುನಿರತ್ನ ಹಾಗೂ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಸದನದ ತುಂಬ ಓಡಾಡಿ ಅಭಿನಂದನೆ ಸ್ವೀಕಾರ ಮಾಡಿದ್ದು ಮತ್ತೊಂದು ವಿಶೇಷವಾಗಿತ್ತು.
ಗಮನ ಸೆಳೆದ ಶಾಸಕ ಅರವಿಂದ ಬೆಲ್ಲದ್!
ಕಾನೂನು ಸಚಿವರಿಗೆ ಮೊದಲ ಸಾಲಿನ ಮೂರನೇ ಸ್ಥಾನ ಕೊಡುವುದು ವಾಡಿಕೆ. ಆದರೆ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರಿಗೆ ಮೊದಲ ಸಾಲಿನ ಮೂರನೇ ಸ್ಥಾನದ ಬದಲು, ಐದನೇಯ ಸ್ಥಾನಕ್ಕೆ ಸ್ಥಳಾಂತರ ಮಾಡಿಕೊಡಲಾಗಿತ್ತು. ಅದರೊಂದಿಗೆ ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿದ್ದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಅವರು ಸದನದ ಕೇಂದ್ರ ಬಿಂದುವಾಗಿದ್ದು ಕೂಡ ಇಂದಿನ ಕಲಾಪದ ವಿಶೇಷಣೆಯಾಗಿತ್ತು.
ಸದನದಲ್ಲಿ ಬಿಜೆಪಿಯ ಎಲ್ಲಾ ಶಾಸಕರನ್ನು ಅರವಿಂದ ಬೆಲ್ಲದ್ ಮಾತನಾಡಿಸಿದರು. ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಎತ್ತಿನಗಾಡಿಯಲ್ಲಿ ವಿಧಾನಸೌಧಕ್ಕೆ ಬಂದಿದ್ದ ಕಾಂಗ್ರೆಸ್ ನಾಯಕರು ಸದನಕ್ಕೆ ತಡವಾಗಿ ಬಂದರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕರು ತಡವಾಗಿ ಸದನಕ್ಕೆ ಬಂದಿದ್ದರು.
ವಿಧಾನಸಭೆಯಲ್ಲಿ ಅಗಲಿದ ಗಣ್ಯರ ಸ್ಮರಣೆ!
ಇನ್ನು ವಿಧಾನಸಭೆ ಕಲಾಪ ಆರಂಭವಾಗುತ್ತಲೇ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಇತ್ತೀಚಿಗೆ ಅಗಲಿದೆ ಮಾಜಿ ಸಚಿವರು ಹಾಗೂ ಶಾಸಕರಾದ ಸಿ.ಎಂ. ಉದಾಸಿ, ವಿಶ್ರಾಂತ ಕುಲಪತಿ ಎಂ.ಐ. ಸವದತ್ತಿ, ಮಾಜಿ ವಿಧಾನ ಸಭಾಧ್ಯಕ್ಷ ಕೃಷ್ಣ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಕೇಂದ್ರದ ಮಾಜಿ ಸಚಿವ ಬಾಬಾಗೌಡ ರುದ್ರಗೌಡ ಪಾಟೀಲ್, ಮಾಸಜಿ ಶಾಸಕ ಜಿ. ಮಾದೇಗೌಡ, ಮಾಜಿ ಸಚಿವರು, ಸಂಸದರು ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕೆ.ಬಿ. ಶಾಣಪ್ಪ, ಪ್ರೊ. ಮಮ್ತಾಜ್ ಆಲಿಖಾನ್, ಮಾಜಿ ಸಚಿವ ಎ.ಕೆ. ಅಬ್ದುಲ್ ಸಮದ್, ಮಾಜಿ ಸಂಸದ ಸಿದ್ನಾಳ್, ರಾಜ್ಯ ಸಭೆಯ ಮಾಜಿ ಸದಸ್ಯ ಎಂ. ರಾಜಗೋಪಾಲ್, ಸಾಹಿತಿ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಾ. ಸಿದ್ಧಲಿಂಗಯ್ಯ, ಮಾಜಿ ಶಾಸಕರಾದ ರೇವಣ್ಣ ಸಿದ್ದಪ್ಪ ಕಲ್ಲೂರ್, ಡಾ. ಚಿತ್ತರಂಜನ್ ಕಲ್ಲುಕೋಟಿ, ಜೇಕಪ್, ಸಯ್ಯದ್ ಜುಲ್ಫಿಕರ್ ಹಶ್ಮಿ, ಮಹಮದ್ ಲೈಕೋದ್ದೀನ್, ಮನೋಹರ್ ಕಟ್ಟಿಮನಿ, ಎನ್.ಎಸ್. ಖೇಡ್, ರಾಜಶೇಖರ್ ಸಿಂಧೂರ ಅವರಿಗೆ ಸಂತಾಪ ಸೂಚಿಸಲಾಯಿತು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments