Select Your Language

Notifications

webdunia
webdunia
webdunia
webdunia

ಪ್ರಣಬ್ ಮುಖರ್ಜಿ ಮೇಲಿನ ಸೋನಿಯಾ ಗಾಂಧಿ ಸಿಟ್ಟು ಟ್ವಿಟರ್ ನಲ್ಲಿ ಬಹಿರಂಗವಾಯ್ತು!

ಪ್ರಣಬ್ ಮುಖರ್ಜಿ ಮೇಲಿನ ಸೋನಿಯಾ ಗಾಂಧಿ ಸಿಟ್ಟು ಟ್ವಿಟರ್ ನಲ್ಲಿ ಬಹಿರಂಗವಾಯ್ತು!
ನವದೆಹಲಿ , ಶುಕ್ರವಾರ, 8 ಜೂನ್ 2018 (08:52 IST)
ನವದೆಹಲಿ: ಕಾಂಗ್ರೆಸ್ ಪಕ್ಷದ ಧೋರಣೆಗೆ ವಿರುದ್ಧವಾಗಿ ಆರ್ ಎಸ್ಎಸ್ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿರುದ್ಧ ಸೋನಿಯಾ ಗಾಂಧಿ ಸಿಟ್ಟಿಗೆದ್ದಿರುವುದು ಟ್ವಿಟರ್ ಮೂಲಕ ಬಹಿರಂಗವಾಗಿದೆ.

ನಾಗ್ಪುರದಲ್ಲಿ ನಡೆದ ಆರ್ ಎಸ್ಎಸ್ ‍ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಷಣ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಪ್ರಣಬ್ ಹೋಗುವುದು ಕಾಂಗ್ರೆಸ್ ನಾಯಕರಿಗೆ ಇಷ್ಟವಿರಲಿಲ್ಲ. ಹಾಗಿದ್ದರೂ ವಿವಾದದ  ನಡುವೆಯೂ ಪ್ರಣಬ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಹೀಗಾಗಿ ಈ ಕಾರ್ಯಕ್ರಮಕ್ಕೆ ಪ್ರಣಬ್ ಹೋಗುವ ಮೊದಲೇ ಸೋನಿಯಾ ಗಾಂಧಿ ತಮ್ಮ ಆಪ್ತ ಕಾರ್ಯದರ್ಶಿ ಗುಜರಾತ್ ರಾಜ್ಯ ಸಭೆ ಸದಸ್ಯ ಅಹಮ್ಮದ್ ಪಟೇಲ್ ಮೂಲಕವಾಗಿ ‘ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಪ್ರಣಬ್ ದಾದ’ ಎಂದು ಟ್ವೀಟ್ ಮಾಡಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವರಾಗುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ: ಹುಕ್ಕೇರಿ