Select Your Language

Notifications

webdunia
webdunia
webdunia
webdunia

ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಚರ್ಮ ಸಮಸ್ಯೆ !

ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಚರ್ಮ ಸಮಸ್ಯೆ !
ನವದೆಹಲಿ , ಸೋಮವಾರ, 19 ಡಿಸೆಂಬರ್ 2022 (08:27 IST)
ಬೆಂಗಳೂರು : ಮುಖದ ಸೌಂದರ್ಯ ವರ್ಧನೆಗೆ ಅಂತಾ ಮಹಿಳೆಯರು ಬ್ಯೂಟಿ ಪಾರ್ಲರ್ಗೆ ಹೋಗೋದು ಸಾಮಾನ್ಯ. ಆದರೆ ಈಗ ಬ್ಯೂಟಿಪಾರ್ಲರ್ಗೆ ಹೋದ ಮಹಿಳೆಯರು, ಚರ್ಮದ ವೈದ್ಯರನ್ನು ಕಾಣುವಂತಾಗಿದೆ.

ಇದಕ್ಕೆ ಸ್ಫೋಟಕ ಕಾರಣವನ್ನು ವೈದ್ಯರ ಜೊತೆಗೆ ಬ್ಯೂಟಿಪಾರ್ಲರ್ ಅಸೋಸಿಯೇಷನ್ ಕೂಡ ಬಾಯಿಬಿಟ್ಟಿದೆ. ಫೇಸ್ ಬ್ಲೀಚ್, ಕ್ಲೀನ್ ಅಪ್, ಹೈಬ್ರೂ, ಪೆಡಿಕ್ಯೂರ್ ಅಂತಾ ಸೌಂದರ್ಯವರ್ಧನೆಗಾಗಿ ಬ್ಯೂಟಿಪಾರ್ಲರ್ಗೆ ಹೋಗೋದು ಕಾಮನ್.

ಆದ್ರೆ, ಬೆಂಗಳೂರಿನಲ್ಲಿ ಇತ್ತೀಚೆಗೆ ಕೆಲ ಪಾರ್ಲರ್ಗಳಿಗೆ ಹೋಗಿ ಬಂದ ತಕ್ಷಣ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಮುಖದಲ್ಲಿ ಬಿಳಿಗುಳ್ಳೆ, ಮುಖದಲ್ಲಿ ನವೆ ಸಮಸ್ಯೆ ಸೇರಿದಂತೆ ಕಲೆಗಳ ಸಮಸ್ಯೆ ಹೆಚ್ಚಾಗ್ತಿದೆಯಂತೆ.

ಕೆಲವೊಂದು ಪಾರ್ಲರ್ನಲ್ಲಿ ಈ ಪ್ರಕ್ರಿಯೆಗಳಿಗೆ ಬಳಸುವ ಸಲಕರಣೆಗಳನ್ನು ಶುದ್ಧೀಕರಣ ಮಾಡದೇ ಇರೋದು, ಸ್ವಚ್ಛತೆ ಕಾಪಾಡದೇ ಇರೋದ್ರಿಂದ ಈ ಸಮಸ್ಯೆ ಎದುರಾಗುತ್ತಿದೆ ಅಂತಾರೆ ವೈದ್ಯರು. ಹೀಗಾಗಿ ಎಚ್ಚರಿಕೆಯಿಂದ ಪಾರ್ಲರ್ಗಳನ್ನು ಆರಿಸಿ ಹೋಗಿ ಅಂತಾ ಸಲಹೆ ನೀಡಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿಯರ ಮೇಲೆ ತೀವ್ರ ನಿಗಾ?