ಚಂಡೀಗಢ : ಪಂಜಾಬ್ನ ಅಮೃತಸರದಲ್ಲಿ ಸೋಮವಾರ ಮುಂಜಾನೆ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭಾರತದ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
 
ಮುಂಜಾನೆ 3:42ರ ವೇಳೆಗೆ ಪಂಜಾಬ್ನ ಅಮೃತಸರದಲ್ಲಿ ಭೂಕಂಪ ಉಂಟಾಗಿದ್ದು, ಅದರ ಕೇಂದ್ರ ಬಿಂದುವನ್ನು ನೆಲದಿಂದ 120 ಕಿ.ಮೀ ಆಳದಲ್ಲಿ ಪತ್ತೆಹಚ್ಚಲಾಗಿದೆ.
 
 			
 
 			
			                     
							
							
			        							
								
																	ಕಳೆದ ಕೆಲ ದಿನಗಳಿಂದ ಉತ್ತರ ಭಾರತದಾದ್ಯಂತ ಒಂದಾದಮೇಲೊಂದರಂತೆ ಭೂಕಂಪಗಳು ಸಂಭವಿಸುತ್ತಲೇ ಇದೆ. ಇದರಿಂದ ಜನರಲ್ಲಿ ಆತಂಕ ಮೂಡಿದೆ. ಭಾನುವಾರ ದೆಹಲಿ-ಎನ್ಸಿಆರ್ನಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿದೆ.
									
										
								
																	ನ್ಯೂ ತೆಹ್ರಿ, ಪಿಥೋರಗಢ, ಬಾಗೇಶ್ವರ್, ಪೌರಿ ಹಾಗೂ ಇತರ ನಗರಗಳು ಸೇರಿದಂತೆ ಉತ್ತರಾಖಂಡದ ಕೆಲ ಭಾಗಗಳಲ್ಲಿ ಕಂಪನದ ಅನುಭವವಾಗಿದೆ.