ನವದೆಹಲಿ : ಮುಂಬರುವ ದಿನಗಳಲ್ಲಿ ವಾತಾವರಣದಲ್ಲಿ ತಾಪಮಾನ ಹೆಚ್ಚುವ ಸಾಧ್ಯತೆ ಹಿನ್ನೆಲೆಯಲ್ಲಿ ಜನರು ಮಧ್ಯಾಹ್ನ 12 ರಿಂದ 3ಗಂಟೆವರೆಗೂ ಮನೆಯಿಂದ ಆಚೆ ಬರದಿರಲು ಸಲಹೆ ನೀಡಿದೆ.
ನಿಗದಿತವಾಗಿ ನಿಂಬೆ ಹಣ್ಣಿನ ಜ್ಯೂಸ್ ಸೇರಿದಂತೆ ತಂಪು ಪಾನಿಯಗಳನ್ನು ಸೇವಿಸಲು ಕೇಂದ್ರ ಆರೋಗ್ಯ ಇಲಾಖೆ ಮನವಿ ಮಾಡಿದೆ. ಮಾರ್ಚ್ನಿಂದ ಮೇವರೆಗೂ ಬಿಸಿಗಾಳಿ ಬೀಸಲಿದ್ದು, ತಾಪಮಾನದಲ್ಲಿ ಏರಿಕೆ ಕಂಡು ಬರಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಗಮನ ಹರಿಸಲು ಹಲವು ಸಲಹೆಗಳನ್ನು ಕೇಂದ್ರ ಆರೋಗ್ಯ ಇಲಾಖೆ ನೀಡಿದೆ.
ಬಾಯಾರಿಕೆಯಾಗದಿದ್ದರೂ ನಿರಂತರವಾಗಿ ನೀರು ಕುಡಿಯಬೇಕು. ಓರಲ್ ರೀಹೈಡ್ರೇಶನ್ ಸೊಲ್ಯೂಷನ್ ಅನ್ನು ಬಳಸುವಂತೆ ಕೇಳಿಕೊಂಡಿದೆ. ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವಾಗ ತೆಳು, ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸಲು ಮತ್ತು ಛತ್ರಿ, ಟೋಪಿ, ಕ್ಯಾಪ್, ಟವೆಲ್ ಮತ್ತು ಇತರ ಸಾಂಪ್ರದಾಯಿಕ ವಸ್ತುಗಳನ್ನು ಬಳಸಬೇಕು. ಹಗಲಿನಲ್ಲಿ ಸೂರ್ಯನ ಕಿರಣಗಳು ನೇರವಾಗಿ ಬೀಳುವ ಕಿಟಕಿಗಳನ್ನು ಬಂದ್ ಮಾಡಿ, ರಾತ್ರಿ ವೇಳೆಯಲ್ಲಿ ಮಾತ್ರ ತೆರೆಯುವಂತೆ ಮನವಿ ಮಾಡಿದೆ.