Webdunia - Bharat's app for daily news and videos

Install App

ಸಂಗಾತಿ ಅನುಮತಿಯಿಲ್ಲದೇ ಕಾಂಡೋಮ್ ತೆಗೆಯುವುದು ಅಪರಾಧ : ಸುಪ್ರೀಂ ಕೋರ್ಟ್

Webdunia
ಬುಧವಾರ, 3 ಆಗಸ್ಟ್ 2022 (08:08 IST)
ಒಟ್ಟಾವಾ : ಸಂಭೋಗದ ವೇಳೆ ಸಂಗಾತಿಯ ಅನುಮತಿಯಿಲ್ಲದೇ ಕಾಂಡೋಮ್ ತೆಗೆಯುವುದು ಅಪರಾಧ ಎಂದು ಕೆನಡಾದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
 
ಲೈಂಗಿಕತೆಯ ವೇಳೆ ತನಗೆ ತಿಳಿಸದೇ ಕಾಂಡೋಮ್ ತೆಗೆದು ಹೆಚ್ಐವಿ ಸೋಂಕಿಗೆ ತುತ್ತಾಗುವಂತೆ ಮಾಡಿದ ವ್ಯಕ್ತಿಯೋರ್ವನ ವಿರುದ್ಧ ಮಹಿಳೆಯೊಬ್ಬರು ನೀಡಿದ ದೂರಿನ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. 

2017ರಲ್ಲಿ ಆನ್ಲೈನ್ನಲ್ಲಿ ಪರಿಚಯವಾದ ಮಹಿಳೆ ಮತ್ತು ಪುರುಷ ತಾವು ಲೈಂಗಿಕವಾಗಿ ಹೊಂದಿಕೊಳ್ಳುತ್ತೇವೆಯೇ ಎಂಬುದನ್ನು ತಿಳಿಯಲು ಸಂದಿಸಿದ್ದಾರೆ. ಈ ಸಂದರ್ಭದಲ್ಲಿ ವ್ಯಕ್ತಿ ಕಾಂಡೋಮ್ ಇಲ್ಲದೇ ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದಾನೆ.

ಇದನ್ನು ಪ್ರಶ್ನಿಸಿದ ಮಹಿಳೆ ಆತನ ವಿರುದ್ಧ ಕೋರ್ಟ್ನಲ್ಲಿ ದಾವೆ ಹೂಡಿದ್ದರು. ಕೆಳಹಂತದ ಕೋರ್ಟ್ನಲ್ಲಿ ನಡೆದ ವಿಚಾರಣೆಯಲ್ಲಿ, ಕಾಂಡೋಮ್ ಇಲ್ಲದೆಯೂ ಲೈಂಗಿಕತೆಗೆ ಆಕೆ ಅನುಮತಿಸಿದ್ದಳು ಎಂದು ಆರೋಪಿ ವಾದಿಸಿದ್ದ. ಇದನ್ನು ಅಂಗೀಕರಿಸಿದ್ದ ಕೋರ್ಟ್ ಪ್ರಕರಣವನ್ನು ಅಲ್ಲಿಗೇ ವಜಾಗೊಳಿಸಿತ್ತು.

ಕೆಳಹಂತದ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಹಿಳೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಳು. ಆತನ ತಪ್ಪಿನಿಂದಾಗಿ ತಾನೀಗ ಹೆಚ್ಐವಿ ಸೋಂಕಿಗೆ ತುತ್ತಾಗಿದ್ದೇನೆ ಎಂದು ಮೇಲ್ಮನವಿ ಸಲ್ಲಿಸಿದ್ದಳು. ವಿಚಾರಣೆ ನಡೆಸಿದ ಕೋರ್ಟ್ ಇಬ್ಬರ ವೈಯಕ್ತಿಕ ಕ್ರಿಯೆಯಲ್ಲಿ ಪುರುಷ ಮಹಿಳೆಗೆ ತಿಳಿಸದೇ ಕಾಂಡೋಮ್ ತೆಗೆದಿರುವುದು ಸರಿಯಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ