ಕೋರ್ಟ್ ತೀರ್ಪು ಏನೇ ಬಂದರೂ ನಾವು ಅದನ್ನು ಸ್ವೀಕರಿಸುತ್ತೇವೆ. ಎಲ್ಲರೂ ನಮ್ಮ ಸಂವಿಧಾನಬದ್ಧ ಕಾನೂನನ್ನ ಗೌರವಿಸಬೇಕು.
ಧಾರ್ಮಿಕ ಆಚರಣೆಗಳು ಶಿಕ್ಷಣಕ್ಕಿಂತ ಮುಖ್ಯ ಅಲ್ಲ. ದೇಶದ ಅಭಿವೃದ್ಧಿ ಚಿಂತನೆಯಲ್ಲಿ ಶಿಕ್ಷಣ ಅತಿಮುಖ್ಯ. ಧಾರ್ಮಿಕ ಆಚರಣೆಗೆ ಶಿಕ್ಷಣ ಸಂಸ್ಥೆಯಲ್ಲಿ ಸೀಮಿತ ಅವಕಾಶ ಇರಬೇಕು. ನಮಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಎಲ್ಲಾ ಅವಕಾಶಗಳು ಇವೆ.
ಸಂವಿಧಾನಾತ್ಮಕ ವಿಚಾರ ಆಗಿರುವುದರಿಂದ ರಾಜ್ಯದಲ್ಲೇ ಸೂಕ್ತ ತೀರ್ಪು ಬರಬಹುದು. ಸುಪ್ರೀಂಕೋರ್ಟ್ ಮೆಟ್ಟಿಲೇರಿದರೂ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಎತ್ತಿ ಹಿಡಿಯುವ ಸಾಧ್ಯತೆ ಹೆಚ್ಚು ಎಂದರು.
ಹಿಜಬ್ ವಿವಾದ ಶಿಕ್ಷಣ ವ್ಯವಸ್ಥೆಗೆ ಕೊಳ್ಳಿ ಇಡುವ ಬೆಳವಣಿಗೆ. ಆರು ಜನ ವಿದ್ಯಾರ್ಥಿನಿಯರು ಬಲಿಪಶುವಾಗಿದ್ದಾರೆ. ದೇಶದ್ರೋಹಿ ಸಂಘಟನೆಗಳು ವಿದ್ಯಾರ್ಥಿಗಳ ಶಿಕ್ಷಣವನ್ನು ಕಸಿದಿವೆ. ಕ್ಷುಲ್ಲಕ ಕಾರಣಕ್ಕೆ ಇಡೀ ರಾಜ್ಯದಲ್ಲಿ ಗೊಂದಲ ಸೃಷ್ಟಿಯಾಯಿತು ಎಂದು ಕಿಡಿಕಾರಿದರು.
ಹಿಜಬ್ ವಿಚಾರದ ತೀರ್ಪು ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಪೋನ್ ಕರೆ ಬಂದಿದ್ದು, ಯಶ್ ಪಾಲ್ ಸುವರ್ಣ ಬೆಂಗಳೂರಿಗೆ ಹೊರಟಿದ್ದಾರೆ.