Publish Date: Tue, 12 Jun 2018 (10:06 IST)
Updated Date: Tue, 12 Jun 2018 (10:09 IST)
ನವದೆಹಲಿ: ಕೋಕಾಕೋಲಾ ಕಂಪನಿ ಮಾಲಿಕರು ನಿಂಬೂ ಸೋಡಾ ಮಾರುತ್ತಿದ್ದರು ಎಂಬ ರಾಹುಲ್ ಗಾಂಧಿ ಹೇಳಿಕೆ ಇದೀಗ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾಗಿದೆ.
ಪ್ರಧಾನಿ ಮೋದಿ ಸರ್ಕಾರದ ಹಿಂದುಳಿದ ವರ್ಗದವರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸುವಾಗ ರಾಹುಲ್ ನಿನ್ನೆ ಕೆಲವು ಬೃಹತ್ ಉದ್ದಿಮೆದಾರರ ಬಗ್ಗೆ ನೀಡಿದ ಹೇಳಿಕೆಗಳು ಇದೀಗ ನಗೆಪಾಟಲಿಗೀಡಾಗಿದೆ.
‘ಕೋಕಾಕೋಲಾ ಕಂಪನಿ ಮಾಲಿಕರು ಕಂಪನಿ ಸ್ಥಾಪಿಸುವ ಮೊದಲು ನಿಂಬೂ ಸೋಡಾ ಮಾರುತ್ತಿದ್ದರು. ಮೆಕ್ ಡೊನಾಲ್ಡ್ ಕಂಪನಿ ಮಾಲಿಕರು ಡಾಬಾ ನಡೆಸುತ್ತಿದ್ದರು’ ಎಂದು ರಾಹುಲ್ ಹೇಳಿದ್ದರು.
ಈ ಹೇಳಿಕೆ ಇದೀಗ ಟ್ರೋಲ್ ಗೊಳಗಾಗಿದೆ. ಆಪಲ್ ಕಂಪನಿ ಮಾಲಿಕ ಆಪಲ್ ಮಾರುತ್ತಿದ್ದರು, ಬಿಲ್ ಗೇಟ್ಸ್ ಬಿಲ್ಲಿಂಗ್ ಮೆಷಿನ್ ಮಾರುತ್ತಿದ್ದರು, ಮೈಕ್ರೋಸೋಫ್ಟ್ ನವರು ವಿಂಡೋಸ್ ಮಾರುತ್ತಿದ್ದರು ಎಂದೆಲ್ಲಾ ಟ್ವಿಟರಿಗರು ರಾಹುಲ್ ಕಾಲೆಳೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Tue, 12 Jun 2018 (10:06 IST)
Updated Date: Tue, 12 Jun 2018 (10:09 IST)