Publish Date: Sun, 17 Jun 2018 (07:40 IST)
Updated Date: Sun, 17 Jun 2018 (09:45 IST)
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಮಿತ್ರ ಪಕ್ಷಗಳು ಜತೆಯಾಗಿ ಸರ್ಕಾರ ರಚಿಸುವ ಸಂದರ್ಭ ಬಂದರೆ ರಾಹುಲ್ ಗಾಂಧಿ ಪ್ರಧಾನಿಯಾಗುವರೇ ಎಂಬ ಅನುಮಾನಗಳಿಗೆ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತೊಮ್ಮೆ ಉತ್ತರಿಸಿದ್ದಾರೆ.
ಖಾಸಗಿ ವಾಹಿನಿಯೊಂದಿಗೆ ನಡೆಸಿದ ಸಂದರ್ಶನವೊಂದರಲ್ಲಿ ಮಾತನಾಡಿದ ತೇಜಸ್ವಿ ಯಾದವ್ ರಾಹುಲ್ ಪ್ರಧಾನಿಯಾಗಲು ಅರ್ಹ ವ್ಯಕ್ತಿಯೇ ಎಂದಿದ್ದಾರೆ.
ರಾಹುಲ್ ಜತೆ ಲೋಕಸಭೆ ಚುನಾವಣೆಯಲ್ಲಿ ಜತೆಯಾಗಿ ಕೆಲಸ ಮಾಡಲು ಉತ್ಸುಕರಾಗಿದ್ದೇನೆಂದು ಹೇಳಿಕೊಂಡಿದ್ದ ತೇಜಸ್ವಿ ಇದೇ ಮೊದಲ ಬಾರಿಗೆ ರಾಹುಲ್ ಪ್ರಧಾನಿ ಪಟ್ಟಕ್ಕೆ ಯೋಗ್ಯ ಎಂಬಂತಹ ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.