Select Your Language

Notifications

webdunia
webdunia
webdunia
webdunia

ಗರಿಷ್ಠ ಫಲಿತಾಂಶ ಸಾಧಿಸಿದ್ದು ಹೆಮ್ಮೆಯ ಸಂಗತಿ : ಬೊಮ್ಮಾಯಿ

ಗರಿಷ್ಠ ಫಲಿತಾಂಶ ಸಾಧಿಸಿದ್ದು ಹೆಮ್ಮೆಯ ಸಂಗತಿ : ಬೊಮ್ಮಾಯಿ
ಬೆಂಗಳೂರು , ಗುರುವಾರ, 19 ಮೇ 2022 (15:05 IST)
ಬೆಂಗಳೂರು : ಇಂದು ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಕ್ಕಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ, ಈ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯವು, ಕಳೆದ ಹತ್ತು ವರ್ಷಗಳಲ್ಲಿ ಗರಿಷ್ಠ ಫಲಿತಾಂಶ 85.63% ನ್ನು ಸಾಧಿಸಿದ್ದು ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.

ಈ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯವು, ಕಳೆದ ಹತ್ತು ವರ್ಷಗಳಲ್ಲಿ ಗರಿಷ್ಠ ಫಲಿತಾಂಶ 85.63% ನ್ನು ಸಾಧಿಸಿದ್ದು ಹೆಮ್ಮೆಯ ಸಂಗತಿ. ಉತ್ತಮ ಅಂಕಗಳಿಸಿ ತೇರ್ಗಡೆಯಾದ ಎಲ್ಲ ವಿದ್ಯಾರ್ಥಿ ವೃಂದಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಈ ಮಹತ್ಸಾಧನೆಗೆ ಕಾರಣವಾದ ಎಲ್ಲ ಶಿಕ್ಷಕ-ಶಿಕ್ಷಕಿಯರು, ತರಬೇತುದಾರರು ಅಭಿನಂದನಾರ್ಹರು. 

ವಿದ್ಯಾರ್ಥಿಗಳ ವಿಜಯ ಯಾತ್ರೆ ಹೀಗೆ ಮುಂದುವರಿಯಲಿ, ನಾಡಿಗೆ ಕೀರ್ತಿ ತರುವಂತಾಗಲಿ. ಅನುತ್ತೀರ್ಣರಾದ ವಿದ್ಯಾರ್ಥಿಗಳು ನಿರಾಸೆ ಹೊಂದದೇ ಮುಂದಿನ ಭಾರಿ ಮತ್ತಷ್ಟು ಪರಿಶ್ರಮದಿಂದ ಪರೀಕ್ಷೆ ಬರೆದು ಯಶಸ್ವಿಯಾಗಲಿ ಎಂದು ಸಿಎಂ ಶುಭ ಹಾರೈಸಿದರು. ಜಿಲ್ಲೆಯ ಒಂದೇ ಶಾಲೆಯ ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಲಾರಿ: 3 ಸಾವು, 11 ಮಂದಿಗೆ ಗಾಯ