Daily Horoscope
✕

ಶಕ್ತಿ ಯೋಜನೆಗೆ ಭಾನುವಾರ ಚಾಲನೆ

Webdunia
ಶನಿವಾರ, 10 ಜೂನ್ 2023 (11:06 IST)
ಬೆಂಗಳೂರು : ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಭಾನುವಾರ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡಲಿದ್ದಾರೆ.

ಈ ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಹಿಸಲಿದ್ದಾರೆ. ಕೇವಲ ಸಿದ್ದರಾಮಯ್ಯ ಸರ್ಕಾರದ ಮಂತ್ರಿಮಂಡಲದವರು ಮಾತ್ರವಲ್ಲ, ಡಿ.ವಿ.ಸದಾನಂದಗೌಡ, ತೇಜಸ್ವಿಸೂರ್ಯ ಸೇರಿದಂತೆ ಬಿಜೆಪಿ ಸಂಸದರಿಗೂ ಆಹ್ವಾನ ನೀಡಲಾಗಿದೆ.

ನಾಳೆಯ ಶಕ್ತಿ ಯೋಜನೆ ಕಾರ್ಯಕ್ರಮವನ್ನು ಹಬ್ಬದಂತೆ ಆಚರಿಸಲು ಸರ್ಕಾರ ಸಿದ್ದತೆ ಮಾಡಿದೆ. ಬಸ್ನಲ್ಲಿ ಸಿದ್ದರಾಮಯ್ಯ ನಾಲ್ಕು ಕಿಲೋಮೀಟರ್ವರೆಗೂ ರೌಂಡ್ಸ್ ಹಾಕಲಿದ್ದು, ಬಿಎಂಟಿಸಿಯ ಬಿಎ-6 ಬಸ್ನಲ್ಲಿ ಸಂಚರಿಸಲಿದ್ದಾರೆ. ನಾಲ್ಕು ಸಾರಿಗೆ ನಿಗಮಗಳ ಎಂಟು ಬಸ್ಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ. ಒಂದು ನಿಗಮದಿಂದ ಎರಡು ಬಸ್ಗಳಿಗೆ ವಿಧಾನಸೌಧ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸಿಎಂ ಹಾಗೂ ಮಂತ್ರಿಮಂಡಲ ವಿಧಾನಸೌಧ ಟು ವಿಧಾನಸೌಧಕ್ಕೆ ಬಸ್ನಲ್ಲಿ ಸಂಚಾರಿಸಲಿದ್ದಾರೆ. 

ವಿಧಾನಸೌಧ-ಎಂಎಸ್ ಬಿಲ್ಡಿಂಗ್-ಮೈಸೂರು ಬ್ಯಾಂಕ್ ಸರ್ಕಲ್-ಮೆಜೆಸ್ಟಿಕ್- ವಿಧಾನಸೌಧಕ್ಕೆ ಬಸ್ ಸಂಚರಿಸಲಿದೆ. ಪ್ರಥಮ ಫ್ರೀ ಟಿಕೆಟ್ ಸಿಎಂ ಸಿದ್ದರಾಮಯ್ಯ ವಿತರಿಸಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಡಿಕೆಶಿಯನ್ನು ಎಳೆದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ರೆಸ್ಪೆಕ್ಟೇ ಇಲ್ಲ ಎಂದು ಟಾಂಗ್ ಕೊಟ್ಟ ಬಿಜೆಪಿ Video

ಸುಪ್ರೀಂಕೋರ್ಟ್ ಗೆ ರಾಹುಲ್ ಗಾಂಧಿ ನೇತೃತ್ವದ ಇಂಡಿ ಒಕ್ಕೂಟದ ನಾಯಕರು ಎಂಟ್ರಿ ಕೊಟ್ಟ ಗಳಿಗೆ ಹೇಗಿತ್ತು ನೋಡಿ Video

ಲೈಂಗಿಕ ಕಿರುಕುಳದ ಆರೋಪಿ ಸಂಸದ ರಾಜೀನಾಮೆ ನೀಡಲಿ: ಭಾರತಿ ಶೆಟ್ಟಿ ಆಗ್ರಹ

ಈಗ ಚುನಾವಣೆ ನಡೆದರೂ 25 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ: ಬಿ.ವೈ.ವಿಜಯೇಂದ್ರ ವಿಶ್ವಾಸ

ಇಡಿ, ಐಟಿ ರೇಡ್ ಬಗ್ಗೆ ನಮಗೆ ಅಧಿಕಾರಿಗಳೇ ಮಾಹಿತಿ ನೀಡ್ತಾರೆ, 200 ಅಧಿಕಾರಿಗಳು ನಮ್ಮ ಸಂಪರ್ಕದಲ್ಲಿದ್ದಾರೆ: ರಾಹುಲ್ ಗಾಂಧಿ Video

ಮುಂದಿನ ಸುದ್ದಿ
Show comments