ಬೆಂಗಳೂರು : ಕೆಪಿಟಿಸಿಎಲ್ ಸೇರಿದಂತೆ ವಿವಿಧ ವಿದ್ಯುತ್ ಕಂಪನಿಗಳು ಭಾರೀ ಸಾಲವನ್ನು ಹೊತ್ತುಕೊಂಡಿರುವ ಅಂಶ ಬೆಳಕಿಗೆ ಬಂದಿದೆ.
ವಿಧಾನ ಪರಿಷತ್ ಕಲಾಪ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಚಿವ ಸುನೀಲ್ ಕುಮಾರ್ ಸಾಲದ ಮಾಹಿತಿ ಕೊಟ್ಟರು.
ಕೆಪಿಟಿಸಿಎಲ್ ಸೇರಿ ವಿದ್ಯುತ್ ಕಂಪನಿಗಳು ಒಟ್ಟು 38,975 ಕೋಟಿ ರೂ. ಸಾಲ ಮಾಡಿವೆ. ಇದರಲ್ಲಿ ಕೆಪಿಟಿಸಿಎಲ್ 9,590 ಕೋಟಿ ರೂ., ಬೆಸ್ಕಾಂ 13,616 ಕೋಟಿ ರೂ., ಸೆಸ್ಕಾಂ 3,536 ಕೋಟಿ ರೂ., ಮೆಸ್ಕಾಂ 1,282 ಕೋಟಿ ರೂ.,
ಹೆಸ್ಕಾಂ 7,480 ಕೋಟಿ ರೂ., ಜೆಸ್ಕಾಂ 3,472 ಕೋಟಿ ರೂ. ಸಾಲವನ್ನು ಆಗಸ್ಟ್ ಅಂತ್ಯದ ವೇಳೆಗೆ ಮಾಡಿವೆ ಎಂದು ಸಚಿವರು ಮಾಹಿತಿ ನೀಡಿದರು.