Select Your Language

Notifications

webdunia
webdunia
webdunia
webdunia

ವಾರಣಾಸಿಗೆ ಪ್ರಧಾನಿ ಮೋದಿ ಭೇಟಿ

ವಾರಣಾಸಿಗೆ ಪ್ರಧಾನಿ ಮೋದಿ ಭೇಟಿ
ನವದೆಹಲಿ , ಬುಧವಾರ, 14 ಜುಲೈ 2021 (11:58 IST)
ನವದೆಹಲಿ(ಜು.14): ಕೊರೋನಾ ಸಂಕಷ್ಟದ ನಡುವೆ ಕೇಂದ್ರ ಸರ್ಕಾರ ದೇಶದಲ್ಲಿನ ಮೂಲ ಸೌಕರ್ಯ ಅಭಿವೃದ್ಧಿಗೆ ತೊಡಕಾಗದಂತೆ ನೋಡಿಕೊಂಡಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 1,500 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆ ಹಾಗೂ ಅಡಿಪಾಯ ಕಾರ್ಯಕ್ರಮಕ್ಕೆ ವಾರಣಾಸಿಗೆ ಭೇಟಿ ನೀಡಲಿದ್ದಾರೆ.


•             1500 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಅಡಿಪಾಯ
•             ಜುಲೈ 15 ರಂದು ಸ್ವಕ್ಷೇತ್ರ ವಾರಣಾಸಿಗೆ ಪ್ರಧಾನಿ ಮೋದಿ ಭೇಟಿ
•             11 ಗಂಟೆಗೆ ಮೋದಿ ಕಾರ್ಯಕ್ರಮ ಆರಂಭ

ಜುಲೈ 15 ರಂದು ಮೋದಿ ವಾರಣಾಸಿಗೆ ಭೇಟಿ ನೀಡಲಿದ್ದಾರೆ.  ಬೆಳಿಗ್ಗೆ 11 ಗಂಟೆಗೆ, BHUನಲ್ಲಿ 100 ಹಾಸಿಗೆಗಳ MCH ವಿಂಗ್, ಗೋದೌಲಿಯಾದಲ್ಲಿ ಮಲ್ಟಿ-ಲೆವೆಲ್ ಪಾರ್ಕಿಂಗ್, ಗಂಗಾ ನದಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೋ-ರೋ ಹಡಗುಗಳು ಮತ್ತು ವಾರಣಾಸಿ ಘಾಜಿಪುರದ ಮೂರು ಲೇನ್ ಫ್ಲೈಓವರ್ ಸೇತುವೆ ಸೇರಿದಂತೆ ವಿವಿಧ ಸಾರ್ವಜನಿಕ ಯೋಜನೆಗಳು ಮತ್ತು ಕಾರ್ಯಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.
ಸುಮಾರು ರೂ. 744 ಕೋಟಿ ವೆಚ್ಚದ ಹೆದ್ದಾರಿಯನ್ನು ಮೋದಿ ಉದ್ಘಾಟಿಸಲಿದ್ದಾರೆ.  ಇದರ ಜೊತೆಗೆ  839 ಕೋಟಿ ರೂಪಾಯಿ ಮೊತ್ತದ ಹಲವಾರು ಯೋಜನೆಗಳು ಮತ್ತು ಲೋಕೋಪಯೋಗಿ ಯೋಜನೆಗೆ ಅಡಿಪಾಯ ಹಾಕಲಿದ್ದಾರೆ.  ಸೆಂಟರ್ ಫಾರ್ ಸ್ಕಿಲ್ ಅಂಡ್ ಟೆಕ್ನಿಕಲ್ ಸಪೋರ್ಟ್ ಆಫ್ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ (ಸಿಪೆಟ್), ಜಲ ಜೀವನ್ ಮಿಷನ್ ಅಡಿಯಲ್ಲಿ 143 ಗ್ರಾಮೀಣ ಯೋಜನೆಗಳು ಮತ್ತು  ಮಾವು ಮತ್ತು ತರಕಾರಿ ಸಂಯೋಜಿತ ಪ್ಯಾಕ್ ಹೌಸ್ ಸೇರಿದಂತೆ ಪ್ರಮುಖ ಯೋಜನೆ ಸೇರಿಕೊಂಡಿವೆ.
ಮಧ್ಯಾಹ್ನ 12: 15 ಗಂಟೆಗೆ ಜಪಾನಿನ ನೆರವಿನೊಂದಿಗೆ ನಿರ್ಮಿಸಲಾಗಿರುವ ಅಂತರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ - ರುದ್ರಕಾಶ್  ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ, ಅವರು ತಾಯಿಯ ಮತ್ತು ಮಕ್ಕಳ ಆರೋಗ್ಯ ವಿಭಾಗ, ಬಿಎಚ್ಯು ಪರಿಶೀಲಿಸಲಿದ್ದಾರೆ. ಕೋವಿಡ್ ಸನ್ನದ್ಧತೆಯನ್ನು ಪರಿಶೀಲಿಸಲು ಅವರು ಅಧಿಕಾರಿಗಳು ಮತ್ತು ವೈದ್ಯಕೀಯ ವೃತ್ತಿಪರರನ್ನು ಭೇಟಿ ಮಾಡಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಂಸತ್ ಮುಂಗಾರು ಅಧಿವೇಶನ