Select Your Language

Notifications

webdunia
webdunia
webdunia
webdunia

ಬಡವರ ಕೈಗೆಟುಕದಂತಾದ ಪೆಟ್ರೋಲ್-ಡೀಸೆಲ್!

ಬಡವರ ಕೈಗೆಟುಕದಂತಾದ ಪೆಟ್ರೋಲ್-ಡೀಸೆಲ್!
ಬೆಂಗಳೂರು , ಶನಿವಾರ, 9 ಅಕ್ಟೋಬರ್ 2021 (07:31 IST)
ಬೆಂಗಳೂರು (ಅ 09) :  ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸತತ 11ನೇ ದಿನ ಏರಿಕೆ ಕಾಣುತ್ತಿದ್ದು, ಬೆಲೆ ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತೈಲ ಬೆಲೆ ಇಂದು ಮತ್ತೆ ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ.

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 31 ಪೈಸೆ ಏರಿಸಿ 1 ಲೀಟರ್ ಪೆಟ್ರೋಲ್ ಅನ್ನು 107.14 ರೂ.ಗೆ ಮಾರಾಟ ಮಾಡಲಾಗಿದ್ದರೆ, ಬಳ್ಳಾರಿ 1 ಲೀಟರ್ ಪೆಟ್ರೋಲ್ಗೆ 22 ಪೈಸೆ ಏರಿಸಲಾಗಿದ್ದು, ಅತ್ಯಧಿಕ 109.19 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಪೆಟ್ರೋಲ್ ಬೆಲೆ ಶೀಘ್ರದಲ್ಲೆ 110 ರೂ ದಾಟುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಡೀಸೆಲ್ ಬೆಲೆಯನ್ನೂ ಏರಿಸಲಾಗಿದ್ದು, ದಾವಣಗೆರೆಯಲ್ಲಿ ಅತ್ಯಧಿಕ ಲೀಟರ್ಗೆ 99 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಇಂದು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಆ ಕುರಿತ ವಿವರ ಇಲ್ಲಿದೆ.
ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 101.01 ರೂ ಇದ್ದರೆ ಡೀಸೆಲ್ ಬೆಲೆ 96.60 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಹೈದ್ರಾಬಾದ್ನಲ್ಲಿ ಪೆಟ್ರೋಲ್ ಬೆಲೆ 109.76 ರೂ ಆಗಿದ್ದರೆ, ಡೀಸೆಲ್ ಬೆಲೆ 101.24 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 103.54 ರೂ ಮತ್ತು ಡೀಸೆಲ್ 92.12 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಪೆಟ್ರೋಲ್ 109.54 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಅನ್ನು 99.92 ರೂ.ಗೆ ಮಾರಾಟ ಮಾಡಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಲೈಬ್ರರಿ ಇದ್ರು ಜನರ ಉಪಯೋಗಕ್ಕಿಲ್ಲ