Select Your Language

Notifications

webdunia
webdunia
webdunia
webdunia

ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ !

ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ !
ಬೆಂಗಳೂರು , ಸೋಮವಾರ, 2 ಮೇ 2022 (07:21 IST)
ಬೆಂಗಳೂರು : ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ವರುಣನ ಅಬ್ಬರ ಜೋರಾಗಿದೆ.

ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನಗರದ ಹಲವೆಡೆ ನೀರು ನುಗ್ಗಿ ಅವಾಂತರವೇ ಸೃಷ್ಟಿಸಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ ಉಂಟಾಗಿದೆ.

ಭಾರೀ ಗಾತ್ರದ ಮರಗಳೂ ವರುಣ ಆರ್ಭಟಕ್ಕೆ ಧರೆಗುರುಳಿದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಗರಪಾಲಿಕೆ ಮುಂದಾಗಿದೆ.

ಕೆಲ ದಿನಗಳಿಂದ ಕೊಂಚ ಬಿಡುವು ನೀಡಿದ್ದ ವರುಣ ಮತ್ತೆ ತನ್ನ ಆರ್ಭಟ ಮುಂದುವರಿಸಿದೆ. ನಿನ್ನೆ ಬೆಂಗಳೂರಿನಲ್ಲಿ ಸೃಷ್ಟಿಸಿದ ಅವಾಂತರಗಳು ಇದಕ್ಕೆ ಸಾಕ್ಷಿಯಾಗಿದೆ. ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಯಾಗಿವೆ. 

 
ಬೆಂಗಳೂರು – 20 ರಿಂದ 79, ವಿದ್ಯಾಪೀಠ – 79, ಸಂಪಂಗಿ ರಾಮನಗರ – 68,  ರಾಜಮಹಲ್ ಗುಟ್ಟಹಳ್ಳಿ – 67.5, ಬಿಳೇಕಹಳ್ಳಿ – 63, ಅರಕೆರೆ – 61, ದೊರೆಸಾನಿ ಪಾಳ್ಯ – 51,  ವಿವಿ ಪುರಂ – 51, ದಯಾನಂದ ನಗರ – 49.5, ಪುಲಕೇಶಿನಗರ – 47, ನಾಯಂಡಹಳ್ಳಿ – 46.5, ಹೆಮ್ಮಿಗೆ ಪುರ – 42.5, ಕುಮಾರಸ್ವಾಮಿ ಲೇಔಟ್ – 40, ಉತ್ತರಹಳ್ಳಿ – 32 ಮಿ.ಮೀ ನಷ್ಟು ಮಳೆಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಗರದ ಹಲವೆಡೆ ಗಾಳಿ, ಆಲಿಕಲ್ಲು ಸಹಿತ ಮಳೆ