Publish Date: Thu, 04 Aug 2022 (15:46 IST)
Updated Date: Thu, 04 Aug 2022 (15:50 IST)
ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು,
ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ಕೆಆರ್ಎಸ್ ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಇಂದಿನ ನೀರಿನ ಮಟ್ಟ 124.76 ಅಡಿಗಳಷ್ಟಿದೆ.
ಇಂದಿನ ಒಳಹರಿವಿನ ಪ್ರಮಾಣ 67,712 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 81,112 ಕ್ಯೂಸೆಕ್ನಷ್ಟಿದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಅಷ್ಟಿದ್ದು, ಇಂದಿನ ಸಂಗ್ರಹ 49.396 ಟಿಎಂಸಿ ಗಳಷ್ಟಿದೆ.