Select Your Language

Notifications

webdunia
webdunia
webdunia
webdunia

ಇನ್ಮುಂದೆ ಮಾಸ್ಕ್ ಧರಿಸದಿದ್ದರೆ ದಂಡ!

ಇನ್ಮುಂದೆ ಮಾಸ್ಕ್ ಧರಿಸದಿದ್ದರೆ ದಂಡ!
ನವದೆಹಲಿ , ಶುಕ್ರವಾರ, 12 ಆಗಸ್ಟ್ 2022 (07:22 IST)
ನವದೆಹಲಿ : ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಮತ್ತೆ ಕಡ್ಡಾಯಗೊಳಿಸಲಾಗಿದೆ.

ಒಂದು ವೇಳೆ ಮಾಸ್ಕ್ ಧರಿಸದೇ ಇದ್ದರೆ 500 ರೂ. ದಂಡವನ್ನು ವಿಧಿಸಲಾಗುತ್ತದೆ. ಈ ನಿಯಮವು ಕಾರಿನಲ್ಲಿ ಪ್ರಯಾಣಿಸುವವರಿಗೆ ಅನ್ವಯಿಸುವುದಿಲ್ಲ.

ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಲೋಕನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ನಡೆಸಿದ ಅಧ್ಯಯನದಲ್ಲಿ ಕೊರೊನಾ ವೈರಸ್ನ ಓಮಿಕ್ರಾನ್ ರೂಪಾಂತರದ ಹೊಸ ಉಪ-ವೇರಿಯಂಟ್ ಅನ್ನು ಕಂಡುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಎಲ್ಎನ್ಜೆಪಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸುರೇಶ್ ಕುಮಾರ್ ಅವರು, ಓಮಿಕ್ರಾನ್ನ ಹೊಸ ಉಪ-ವೇರಿಯಂಟ್ – ಬಿಎ 2.75 – ಪ್ರಕರಣದ ದರ ಹೆಚ್ಚು ವರದಿಯಾಗಿದೆ ಎಂದು ತಿಳಿಸಿದ್ದಾರೆ. 

ದೆಹಲಿಯಲ್ಲಿ ಮಂಗಳವಾರದಂದು 2,495 ಕೊರೊನಾ ಪ್ರಕರಣಗಳು ವರದಿ ಆಗಿದ್ದರೆ, ಬುಧವಾರ 2,146 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಪಾಸಿಟಿವಿಟಿ ದರವು 17.83ಕ್ಕೆ ಏರಿಕೆಯಾಗಿದೆ ಮತ್ತು ಎಂಟು ಮಂದಿ ಸಾವನ್ನಪ್ಪಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಎಸಿಬಿ ರದ್ದು ಗೊಳಿಸಿದ ಹೈಕೋರ್ಟ್ ನಿರ್ಧಾರ ಉತ್ತಮ - ನಿ. ನ್ಯಾ ಸಂತೋಷ ಹೆಗ್ಡೆ ಪ್ರತಿಕ್ರಿಯೆ