Select Your Language

Notifications

webdunia
webdunia
webdunia
webdunia

ದರ ನಿಗದಿ ಓಲಾ, ಉಬರ್ ಆಕ್ಷೇಪ : ಅಧಿಸೂಚನೆಗೆ ಹೈಕೋರ್ಟ್ ತಡೆ

ದರ ನಿಗದಿ ಓಲಾ, ಉಬರ್ ಆಕ್ಷೇಪ : ಅಧಿಸೂಚನೆಗೆ ಹೈಕೋರ್ಟ್ ತಡೆ
ಬೆಂಗಳೂರು , ಗುರುವಾರ, 5 ಜನವರಿ 2023 (07:46 IST)
ಬೆಂಗಳೂರು : ಕರ್ನಾಟಕ ಸರ್ಕಾರ ನಿಗದಿ ಮಾಡಿದ ಆಟೋ ದರಕ್ಕೆ ಓಲಾ, ಉಬರ್ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಸರ್ಕಾರದ ಅಧಿಸೂಚನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
 
ಕಳೆದ ವರ್ಷ ನವೆಂಬರ್ 25ರಂದು ಓಲಾ, ಉಬರ್ ಮೊದಲಾದ ಅಗ್ರಿಗೇಟರ್ ಆಟೋ ಸೇವೆಗಳ ದರ ನಿಯಂತ್ರಿಸಲು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿಗಳು ನಿಗದಿಪಡಿಸಿರುವ ದರಗಳ ಮೇಲೆ ಹೆಚ್ಚುವರಿಯಾಗಿ ಶೇ. 5ರಷ್ಟು ಸೇವಾ ಶುಲ್ಕ ಮತ್ತು ಜಿಎಸ್ಟಿ ವಿಧಿಸಬಹುದು ಎಂದು ಆದೇಶ ನೀಡಿತ್ತು. 

ಈ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ಈ ಅರ್ಜಿಗಳು ಇತ್ಯರ್ಥವಾಗುವವರೆಗೆ ಸರ್ಕಾರದ ಅಧಿಸೂಚನೆಗೆ ತಡೆ ನೀಡಿ ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿತು.

Share this Story:

Follow Webdunia kannada

ಮುಂದಿನ ಸುದ್ದಿ

ಜನಸಂಖ್ಯಾ ಕುಸಿತ : ಟೋಕಿಯೋ ಸರ್ಕಾರದಿಂದ ಜನರಿಗೆ ಆಫರ್