Select Your Language

Notifications

webdunia
webdunia
webdunia
webdunia

ಫೀಸ್ ಕಟ್ಟೋಕೆ ಶಾಲೆಗಳಿಂದ ಆಫರ್ –ಪೋಷಕರು ಕಂಗಾಲು

ಫೀಸ್ ಕಟ್ಟೋಕೆ ಶಾಲೆಗಳಿಂದ ಆಫರ್ –ಪೋಷಕರು ಕಂಗಾಲು
ಬೆಂಗಳೂರು , ಮಂಗಳವಾರ, 21 ಫೆಬ್ರವರಿ 2023 (09:45 IST)
ಬೆಂಗಳೂರು : ಒಂದು ವರ್ಷದ ಶಾಲಾ ಶುಲ್ಕ ಕಟ್ಟುವುದರಲ್ಲೇ ಪೋಷಕರು ಹೈರಾಣಾಗುತ್ತಾರೆ.  ಅಂತಹದರಲ್ಲಿ ಖಾಸಗಿ ಶಾಲೆಗಳು ಈಗಲೇ 10 ವರ್ಷದ ಮುಂಗಡ ಶುಲ್ಕ ಕಟ್ಟಲು ಆಫರ್ ನೀಡಿದೆ.

ಹೌದು.. ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ 10 ವರ್ಷದ ಶುಲ್ಕವನ್ನು ಮುಂಗಡವಾಗಿ ಕಟ್ಟಬಹುದು. ಇದು ಕಡ್ಡಾಯವಲ್ಲ. ಆದರೆ ಇಷ್ಟವಿದ್ದ ಪೋಷಕರು ಇದನ್ನು ಕಟ್ಟಬಹುದು. 10 ವರ್ಷಕ್ಕೆ 20 ಲಕ್ಷ ರೂ. ಕಟ್ಟಿ ಅಡ್ವಾನ್ಸ್ ಫೀಸ್ ಕಟ್ಟಬಹುದು.

1 ರಿಂದ 10ನೇ ತರಗತಿಯವರೆಗೆ ಮುಂಗಡವಾಗಿ ದಾಖಲಾತಿ ಮಾಡಿಸಬಹುದು. ಹಣ ಮುಂಗಡ ಪಾವತಿ ಮಾಡಿದ್ರೆ, ಫೀಸ್ ಹೆಚ್ಚಳದ ಬಿಸಿ ತಟ್ಟಲ್ಲ ಅಂತ ಶಾಲೆ ಸುತ್ತೋಲೆ ಹೊರಡಿಸಿದೆ.

ಉದಾಹರಣೆಗೆ ಒಂದು ಮಗುವಿಗೆ ವರ್ಷಕ್ಕೆ 2 ಲಕ್ಷ ಫೀಸ್ ಅಂದ್ರೆ, 10 ವರ್ಷಕ್ಕೆ 20 ಲಕ್ಷದಲ್ಲಿ ಮಗುವಿನ ಶಿಕ್ಷಣ ಮುಗಿದು ಹೋಗುತ್ತದೆ. ಈ ಆಫರ್ ಸ್ವೀಕಾರ ಮಾಡಿಲ್ಲ ಅಂದ್ರೆ ಒನ್ ಟು ಡಬಲ್ ಹಣ ಪಾವತಿ ಮಾಡಬೇಕಾಗುತ್ತದೆ ಎಂದು ಹೇಳಿ ಪೋಷಕರ ಸೆಳೆಯುವ ಯತ್ನ ಮಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ, ರಾಜ್ಯ ಸರ್ಕಾರಗಳ ಕಾಯ್ದೆ-ಕಾನೂನು ಕನ್ನಡ ಭಾಷೆಯಲ್ಲೇ ಲಭ್ಯ