Select Your Language

Notifications

webdunia
webdunia
webdunia
webdunia

ಲಸಿಕೆ ಪಡೆಯದಿದ್ರೆ ಮದ್ಯ, ರೇಷನ್ ಇಲ್ಲ!

ಲಸಿಕೆ ಪಡೆಯದಿದ್ರೆ ಮದ್ಯ, ರೇಷನ್ ಇಲ್ಲ!
ಬೆಂಗಳೂರು , ಗುರುವಾರ, 2 ಡಿಸೆಂಬರ್ 2021 (07:16 IST)
ಕೋವಿಡ್ ಎರಡನೇ ಅಲೆ ತಗ್ಗಿದೆ ಎಂದು ಸಮಾಧಾನ ಪಟ್ಟುಕೊಳ್ಳುತ್ತಿರುವಾಗಲೇ ದಕ್ಷಿಣ ಆಫ್ರಿಕಾದ ಕೋವಿಡ್ ರೂಪಾಂತರ ತಳಿ ಕೋವಿಡ್ 19 Omicron  ಜಗತ್ತಿನೆಲ್ಲೆಡ ಆತಂಕ ಮೂಡಿಸಿದೆ.

 ಲಸಿಕೆಗೂ ಬಗ್ಗದ ಈ ಸೋಂಕು ಬಹುಬೇಗ ಹರಡುತ್ತಿರುವುದು ಹೆಚ್ಚಿನ ಭೀತಿ ಉಂಟು ಮಾಡಿದೆ. ಈಗಾಗಲೇ ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸೋಂಕು ಕಂಡು ಬಂದಿದ್ದು, ದೇಶದಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಸುಮಾರು ಎರಡು ವರ್ಷಗಳ ನಂತರ ಪ್ರಯಾಣ ನಿಷೇಧವನ್ನು ತೆಗೆಯುತ್ತಿರುವ ದೇಶಗಳು ಈಗ ಮತ್ತೊಮ್ಮೆ ಈ ನಿರ್ಧಾರವನ್ನು ಪರಿಶೀಲಿಸುತ್ತಿವೆ.
 ರೂಪಾಂತರಿ ಓಮ್ರಿಕಾನ್ ಮೇಲೆ ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಕಳವಳ ಎದುರಾಗುತ್ತಿರುವಾಗ ದೇಶದಲ್ಲಿ ಅನೇಕ ಜನರು ಇನ್ನೂ ಕೂಡ ಕೋವಿಡ್ ಲಸಿಕೆ ಪಡೆದೆ ಇಲ್ಲ. ಈ ಹಿನ್ನಲೆ ಎಚ್ಚೆತ್ತ ಸರ್ಕಾರಗಳು ಹಲವರು ಕಠಿಣ ನಿಯಮಕ್ಕೆ ಮುಂದಾಗಿದೆ.
ಜಾಗತಿಕ ಸರಾಸರಿಯನ್ನು ಪರಿಗಣಿಸಿದರೆ, ಭಾರತದಲ್ಲಿ ಲಸಿಕೆ ವ್ಯಾಪ್ತಿಯು ತೀರಾ ಕಡಿಮೆಯಾಗಿದೆ. ಭಾರತದಲ್ಲಿ ಇದುವರೆಗೂ 1,24,10,86,850 ಜನರಿಗೆ ಲಸಿಕೆ ಹಾಕಿದೆ. ಟೈಮ್ಸ್ ಆಫ್ ಇಂಡಿಯಾ ವರದಿ, 50 ಮಿಲಿಯನ್ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ 29 ದೇಶಗಳಲ್ಲಿ ಭಾರತದ ಲಸಿಕೆ ಪಡೆದ ಜನರ ಶೇಕಡಾವಾರು ಪ್ರಮಾಣದಲ್ಲಿ ಕುಸಿದಿದೆ. ಅನೇಕ ಜನರು ಎರಡು ಡೋಸ್ ಲಸಿಕೆ ಪಡೆದಿಲ್ಲ. ಇನ್ನು ಅನೇಕರು ಮೊದಲ ಡೋಸ್ ಪಡೆದು, ಎರಡನೇ ಡೋಸ್ ಲಸಿಕೆ ಪಡೆದೆ ಇಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಕಮರ್ಷಿಯಲ್ ಸಿಲಿಂಡರ್​ಗಳ ಬೆಲೆಯಲ್ಲಿ 100 ರೂಪಾಯಿ ಏರಿಕೆ