Select Your Language

Notifications

webdunia
webdunia
webdunia
webdunia

ಧ್ವನಿವರ್ಧಕ ಬಳಸುವ ಬಗ್ಗೆ ಗೊಂದಲ ಇಲ್ಲ : ಕಮಲ್ ಪಂತ್

ಧ್ವನಿವರ್ಧಕ ಬಳಸುವ ಬಗ್ಗೆ ಗೊಂದಲ ಇಲ್ಲ : ಕಮಲ್ ಪಂತ್
ಬೆಂಗಳೂರು , ಬುಧವಾರ, 11 ಮೇ 2022 (14:42 IST)
ಬೆಂಗಳೂರು : ನಗರದಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟಪಡಿಸಿದ್ದಾರೆ.
 
ನಗರದಲ್ಲಿ ಎಲ್ಲರೂ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತಿದ್ದಾರೆ. ಈ ಸಂಬಂಧ ಸರ್ಕಾರ ಹೊಸದಾಗಿ ಮಾರ್ಗಸೂಚಿ ಕೂಡ ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ. 

2002ರಲ್ಲಿ ಸುಪ್ರೀಂ ಕೋರ್ಟ್ ಜಾರಿ ಮಾಡಿರುವ ಆದೇಶ ಪಾಲನೆ ಮಾಡಬೇಕು. ರಾತ್ರಿ ಹತ್ತು ಗಂಟೆಯಿಂದ ಮುಂಜಾನೆ 6 ಗಂಟೆಯ ತನಕ ನಗರದಲ್ಲಿ ಯಾವುದೇ ಲೌಡ್ ಸ್ಪೀಕರ್ಗಳನ್ನು ಬಳಕೆ ಮಾಡಬಾರದು.  ವಿಶೇಷ ಸಮಯದಲ್ಲಿ ಅನುಮತಿ ಹೊರತುಪಡಿಸಿ ಯಾವುದೇ ಲೌಡ್ಸ್ಪೀಕರ್ ಬಳಕೆ ನಿಷೇಧ ಮಾಡಲಾಗಿದೆ ಎಂದು ಹೇಳಿದ್ದಾರೆ.

ಲೌಡ್ಸ್ಪೀಕರ್ ಬಗ್ಗೆ ಸರ್ಕಾರ ಸಭೆ ಮಾಡಿ ಒಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರಂತೆ ಅನಧಿಕೃತವಾಗಿರುವ ಮೈಕ್ಗಳಿಗೆ 15 ದಿನ ಸರ್ಕಾರ ಗಡುವು ನೀಡಿದೆ. 15 ದಿನಗಳ ಒಳಗಾಗಿ ಅರ್ಜಿ ಹಾಕಿ ಅಧಿಕೃತ ಮಾಡಿಕೊಳ್ಳಬೇಕು. 15 ದಿನದ ನಂತರ ಅನಧಿಕೃತ ಮೈಕ್ಗಳನ್ನು ತೆರವು ಮಾಡುವ ಎಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಒಂದು ಕುಟುಂಬಕ್ಕೆ ಒಂದೇ ಟಿಕೆಟ್: ಕಾಂಗ್ರೆಸ್ ನಿಂದ ಮಹತ್ವದ ನಿರ್ಧಾರ?