Select Your Language

Notifications

webdunia
webdunia
webdunia
webdunia

ನಿಫಾ ವೈರಸ್ ಭೀತಿ : ರಾಜ್ಯದ ಗಡಿಯಲ್ಲಿ ಹೈ ಅಲರ್ಟ್

ನಿಫಾ ವೈರಸ್ ಭೀತಿ : ರಾಜ್ಯದ ಗಡಿಯಲ್ಲಿ ಹೈ ಅಲರ್ಟ್
ಚಾಮರಾಜನಗರ , ಭಾನುವಾರ, 17 ಸೆಪ್ಟಂಬರ್ 2023 (09:18 IST)
ಚಾಮರಾಜನಗರ : ಕೇರಳದಲ್ಲಿ ನಿಫಾ ವೈರಸ್ಗೆ ಇಬ್ಬರು ಮೃತಪಟ್ಟ ನಂತರ ರಾಜ್ಯ ಸರ್ಕಾರ ಫುಲ್ ಅಲರ್ಟ್ ಆಗಿದೆ. ರಾಜ್ಯದ ಕೇರಳ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದ್ದು, ಕಟ್ಟುನಿಟ್ಟಿನ ತಪಾಸಣೆ ನಡೆಸಲು ಸೂಚಿಸಿದೆ.
 
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ನಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್ ನಡೆಸಲಾಗುತ್ತಿದೆ.

ಗೂಡ್ಸ್ ವಾಹನಗಳಿಗೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ತಪಾಸಣೆ ಬಳಿಕವೇ ವಾಹನಗಳನ್ನ ರಾಜ್ಯ ಪ್ರವೇಶಕ್ಕೆ ಬಿಡಲಾಗುತ್ತಿದೆ. ಜೊತೆಗೆ ರೋಗ ಲಕ್ಷಣ ಉಳ್ಳವರ ಟ್ರಾವೆಲ್ ಹಿಸ್ಟರಿಯನ್ನೂ ಕಲೆಹಾಕಲಾಗುತ್ತಿದೆ.

ಹಂದಿ ಸೇರಿದಂತೆ ಮಾಂಸಾಹಾರ ಪದಾರ್ಥ ಸಾಗಿಸುವ ವಾಹನಗಳ ಮೇಲೆ ನಿಗಾ ಇಡಲಾಗಿದ್ದು, ಗುರುವಾರದಿಂದ ಗುಂಡ್ಲುಪೇಟೆ ಕಾಡಂಚಿನ ಗ್ರಾಮಗಳಲ್ಲಿ ಮನೆ-ಮನೆ ಸರ್ವೇ ನಡೆಸಿ ರೋಗ ಲಕ್ಷಣಗಳು ಕಂಡು ಬಂದವರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಷರತ್ತು ವಿಧಿಸಿ ಈದ್ಗಾದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆ ಅನುಮತಿ