Select Your Language

Notifications

webdunia
webdunia
webdunia
webdunia

ಕೋವಿಡ್ ವಾರ್ ರೂಮ್​ಗೆ ರಾಷ್ಟ್ರ ಪ್ರಶಸ್ತಿ

ಕೋವಿಡ್ ವಾರ್ ರೂಮ್​ಗೆ ರಾಷ್ಟ್ರ ಪ್ರಶಸ್ತಿ
ಹೈದರಾಬಾದ್ , ಭಾನುವಾರ, 9 ಜನವರಿ 2022 (06:59 IST)
ಹೈದರಾಬಾದ್ : ಇ-ಆಡಳಿತದ 24ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.
ಹೈದರಾಬಾದ್ನಲ್ಲಿ ಇ-ಆಡಳಿತದ 24ನೇ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಈ ವೇಳೆ ಕರ್ನಾಟಕ ರಾಜ್ಯ ಕೋವಿಡ್-19 ವಾರ್ ರೂಮ್ ಗೆ ಕೋವಿಡ್ ನಿರ್ವಹಣೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು(ಐಸಿಟಿ) ಬಳಸುವ ವಿಭಾಗಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ಈ ಪ್ರಶಸ್ತಿಯನ್ನು ಕೋವಿಡ್ ವಾರ್ ರೂಮ್ ಮುಖ್ಯಸ್ಥ ಮುನಿಶ್ ಮೌದ್ಗಿಲ್ ಸ್ವೀಕರಿಸಿದರು. ನಂತರ ಈ ಕುರಿತು ಮಾತನಾಡಿದ ಅವರು, ಕೋವಿಡ್ ವಾರಿಯರ್ಸ್ ಗಳಿಗೆ ನಾವು ಸಪೋರ್ಟ್ ನೆಟ್ ವರ್ಕ್ ಆಗಿದ್ದೇವೆ.

ಸರಿಯಾದ ಸಮಯಕ್ಕೆ ಸೂಕ್ತ ಮಾಹಿತಿಯನ್ನು ನೀಡಿ ಜೀವ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕೋವಿಡ್ ನಿರ್ವಹಣೆಗೆ ಬೆಂಬಲ ವ್ಯವಸ್ಥಿತವಾಗಿದೆ.

ರಾಜ್ಯಕ್ಕೆ ಮಾರ್ಚ್ 2020 ರಲ್ಲಿ ಮೊದಲ ಅಲೆ ಅಪ್ಪಳಿಸಿತ್ತು. ಈ ಅಲೆ ಆರಂಭವಾದ 2-3 ದಿನಗಳಲ್ಲಿ ವಾರ್ಡ್ ರೂಮ್ ಅನ್ನು ಸ್ಥಾಪಿಸಲಾಗಿತ್ತು. ಈ ವೇಳೆ ಕೊರೊನಾ ವಾಚ್ ಮೊಬೈಲ್ ಅಪ್ಲಿಕೇಶನ್ ಅನ್ನು ಮೊದಲು ರಚಿಸಲಾಯಿತು.

ಇಡೀ ಭಾರತದಲ್ಲಿ ಸೋಂಕಿತರ ಸಂಪರ್ಕ ಪತ್ತೆಹಚ್ಚುವಿಕೆಗಾಗಿ ಅಪ್ಲಿಕೇಶನ್ ಅನ್ನು ಬಳಸುತ್ತಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ ಎಂದು ಹೆಮ್ಮೆಯಿಂದ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪಂಚ ರಾಜ್ಯಗಳ ಚುನಾವಣೆ ಡೇಟ್ ಫಿಕ್ಸ್?