Publish Date: Tue, 03 Jan 2023 (12:56 IST)
Updated Date: Tue, 03 Jan 2023 (12:35 IST)
ಬೆಂಗಳೂರು : ಹೊಸ ವರ್ಷದ ಸಂಭ್ರಮೋತ್ಸವಕ್ಕೆ ಬೆಂಗಳೂರು ನಗರ ಸಜ್ಜಾಗಿದೆ. ಕೊರೊನಾದಿಂದ ಲಾಕ್ ಡೌನ್ ಬಳಿಕ ಬಂದಿರುವ ಹೊಸ ವರ್ಷಕ್ಕೆ ಬ್ರಿಗೇಡ್ ರೋಡ್ ಸೇರಿದಂತೆ ಪಾರ್ಟಿ ಸ್ಥಳಗಳು ಝಗಮಗಿಸ್ತಿದ್ದು, ಪೊಲೀಸರು ಇಡೀ ಬೆಂಗಳೂರನ್ನ ಸುಪರ್ದಿಗೆ ಪಡೆದಿದ್ದಾರೆ.
ಹೊಸ ವರ್ಷಕ್ಕಿದ್ದ ಆತಂಕ ದೂರಾಗಿದ್ದು, ಸೆಲೆಬ್ರೇಷನ್ಗೆ ಕೌಂಟ್ಡೌನ್ ಶುರುವಾಗಿದೆ. ಇಂದು ಸಂಜೆಯಿಂದಲೇ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಸೇರಿ ಹಲವು ಭಾಗಗಳಲ್ಲಿ ಬಿಗ್ ಸೆಲೆಬ್ರೇಷನ್ಗೆ ಯುವ ಸಮೂಹದ ದಂಡೇ ಸೇರುತ್ತೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ರೂಲ್ಸ್ & ರೆಗ್ಯುಲೇಷನ್ ಬಿಡುಗಡೆ ಮಾಡಿದ್ದು, ಪೊಲೀಸರು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.