ಇಂದು ಖಗ್ರಾಸ ಚಂದ್ರಗ್ರಹಣ: ದೇವಾಲಯಗಳಲ್ಲಿ ವಿಶೇಷ ಪೂಜೆ

Webdunia
ಶುಕ್ರವಾರ, 27 ಜುಲೈ 2018 (09:07 IST)
ಬೆಂಗಳೂರು: ಶತಮಾನದ ಸುದೀರ್ಘ ಖಗ್ರಾಸ ಚಂದ್ರಗ್ರಹಣ ಇಂದು ಸಂಭವಿಸಲಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆ, ಹವನಗಳು ನಡೆಯಲಿವೆ.
 

ಇಂದು ರಾತ್ರಿ 11.45 ರ ನಂತರ ಚಂದ್ರಗ್ರಹಣ ನಡೆಯಲಿದ್ದು, ಬೆಳಿಗ್ಗೆ 4 ಗಂಟೆಯವರೆಗೂ ಗ್ರಹಣ ಕಾಲವಿರುತ್ತದೆ. ಚಂದ್ರ ಕೇಸರಿ ಬಣ್ಣದಲ್ಲಿ ಗೋಚರಿಸುವುದು ಇಂದಿನ ವಿಶೇಷತೆ.

ಗ್ರಹಣದ ಪ್ರಯುಕ್ತ ನಾಡಿನ ವಿವಿಧ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಗಳು ನಡೆಯಲಿವೆ. ಇನ್ನು ಕೆಲವೆಡೆ ಪೂಜಾ ಸಮಯದಲ್ಲಿ ಬದಲಾವಣೆಯಾಗಲಿದೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳದಲ್ಲಿ ಇಂದು ಸಂಜೆ ಬೇಗನೇ ದೇವರ ದರ್ಶನ ನಡೆಯಲಿದೆ. ರಾತ್ರಿ ಪೂಜೆ ಬೇಗನೇ ನಡೆಯುವುದು. ಹೊರನಾಡಿನಲ್ಲಿ ಪೂಜೆ ಎಂದಿನಂತೆ ನಡೆಯುವುದಿದ್ದರೂ ರಾತ್ರಿ ಭೋಜನ ವ್ಯವಸ್ಥೆ ಇರುವುದಿಲ್ಲ.

ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಾಲಯ, ನಿಮಿಷಾಂಬ ದೇವಾಲಯ, ಚಂದ್ರಮೌಳೇಶ್ವರ ದೇವಾಲಯಗಳಲ್ಲಿ ಸಂಜೆಯವರೆಗೆ ಮಾತ್ರ ದೇವರ ದರ್ಶನ ವ್ಯವಸ್ಥೆಯಿರುತ್ತದೆ. ನಾಡದೇವತೆ ಚಾಮುಂಡೇಶ್ವರಿ ದೇವಾಲಯದಲ್ಲೂ ರಾತ್ರಿ 9.30 ಕ್ಕೆ ಬಾಗಿಲು ಬಂದ್ ಆಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಇರಾನ್ ಗೆ ಡೊನಾಲ್ಡ್ ಟ್ರಂಪ್ ವಿಧಿಸಿದ ಷರತ್ತುಗಳು ಯಾವುವು ಗೊತ್ತಾ

ಇರಾನ್ ನಮಗೆ ಗಿಫ್ಟ್ ಕೊಟ್ಟಿದೆ ಎಂದ ಡೊನಾಲ್ಡ್ ಟ್ರಂಪ್: ಆ ಗಿಫ್ಟ್ ಏನು

ಹುಟ್ಟಿದ ಮಗು ಅಳಲೇ ಇಲ್ಲ: ವೈದ್ಯರು ಮಾಡಿದ ಕೆಲಸವೇನು ನೋಡಿ Video

ಅಬ್ದುಲ್ ಕಲಾಂರನ್ನು ನಮ್ಮ ಕಾಂಗ್ರೆಸ್ ರಾಷ್ಟ್ರಪತಿ ಮಾಡಿದ್ದು ಎಂದಿದ್ದ ಪ್ರದೀಪ್ ಈಶ್ವರ್: ಅಸಲಿ ವಿಚಾರವೇನು ನೋಡಿ

ಮುಂದಿನ ಸುದ್ದಿ
Show comments