ಭಾರತದ ಜೀವನಾಡಿ ಎಂದು ಪರಿಗಣಿಸಲ್ಪಟ್ಟಿರುವ ನೈಋತ್ಯ ಮಾನ್ಸೂನ್ ಈ ಬಾರಿ ಮೂರು ದಿನಗಳ ಮುನ್ನವೇ ಕೇರಳಕ್ಕೆ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ.
ಮೇ 29ಕ್ಕೆ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದು, ಇನ್ನು 2 ದಿನಗಳಲ್ಲಿ ಕರ್ನಾಟಕಕ್ಕೆ ಪ್ರವೇಶ ಪಡೆಯುವ ನಿರೀಕ್ಷೆ ಇದೆ ಎನ್ನಲಾಗಿದೆ.
ಕೇರಳದ ಮೇಲೆ ಮಾನ್ಸೂನ್ನ ಆರಂಭವು ನಾಲ್ಕು ತಿಂಗಳ ಅವಧಿಯ (ಜೂನ್-ಸೆಪ್ಟೆಂಬರ್) ಮೂಲಕ ಭಾರತದ ಮೇಲೆ ನೈಋತ್ಯ ಮಾನ್ಸೂನ್ ಋತುವಿನ ಆರಂಭವನ್ನು ಸೂಚಿಸುತ್ತದೆ.
ಭಾರತದ ಕೃಷಿ-ಆಧಾರಿತ ಆರ್ಥಿಕತೆಯ ಜೀವನಾಡಿ ಎಂದು ಪರಿಗಣಿಸಲ್ಪಟ್ಟಿರುವ ನೈಋತ್ಯ ಮಾನ್ಸೂನ್ ತನ್ನ ಸಾಮಾನ್ಯ ಆರಂಭದ ದಿನಾಂಕವಾದ ಜೂನ್ 1 ಕ್ಕಿಂತ ಮೂರು ದಿನಗಳ ಮುಂಚಿತವಾಗಿ ಆಗಮಿಸಿದೆ.
ಪ್ರಪಂಚದ ಕೃಷಿ ಉತ್ಪನ್ನಗಳ ಅತಿದೊಡ್ಡ ಉತ್ಪಾದಕರು ಮತ್ತು ಕೃಷಿ ಸರಕುಗಳ ಗ್ರಾಹಕರಾಗಿರುವ ಭಾರತದ ರೈತರು ತಮ್ಮ ಭೂಮಿಗೆ ನೀರುಣಿಸಲು ಮಾನ್ಸೂನ್ ಮಳೆಯ ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಶೇ. 50 ರಷ್ಟು ಭಾರತದ ಕೃಷಿ ಭೂಮಿಗೆ ನೀರಾವರಿ ಕೊರತೆಯಿದೆ.