Webdunia - Bharat's app for daily news and videos

Install App

ಜಗತ್ತಿನ 100 ಪ್ರಭಾವಶಾಲಿ ನಾಯಕರ ಪಟ್ಟಿಯಲ್ಲಿ ಮೋದಿ ಮತ್ತು ದೀದಿ!

Webdunia
ಗುರುವಾರ, 16 ಸೆಪ್ಟಂಬರ್ 2021 (07:52 IST)
ನವದೆಹಲಿ, ಸೆ 16 : ಜಗತ್ತಿನ ಪ್ರಭಾವಿ ನಾಯಕರ ಪಟ್ಟಿಯನ್ನು ಟೈಮ್ಸ್ ನಿಯತಕಾಲಿಕೆ ಪ್ರಕಟಿಸಿದ್ದು, ಭಾರತದ ಮೂವರು ಪ್ರಮುಖ ಸ್ಖಾನದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಅದರ್ ಪೂನಾವಾಲಾ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

2021ನೇ ಸಾಲಿನಲ್ಲಿ ಜಗತ್ತಿನ ಅತಿಪ್ರಭಾವಿ ಎನಿಸಿರುವ 100 ವ್ಯಕ್ತಿಯಗಳ ಪಟ್ಟಿಯನ್ನು ಟೈಮ್ಸ್ ನಿಯತಕಾಲಿಕೆಯು ಪ್ರಕಟಿಸಿದೆ. ಒಟ್ಟು ಆರು ವಲಯಗಳಲ್ಲಿ ಪ್ರಖ್ಯಾತಿ ಪಡೆದಿರುವ ನಾಯಕರನ್ನು ಆಯ್ಕೆ ಮಾಡಲಾಗಿದೆ. ಚಿಹ್ನೆಗಳು, ಪ್ರವರ್ತಕರು, ಟೈಟಾನ್ಸ್, ಕಲಾವಿದರು, ನಾಯಕರು ಮತ್ತು ಆವಿಷ್ಕಾರಕರನ್ನು ವಿಂಗಡಿಸಲಾಗಿದೆ.
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ
ಸಿಎನ್ಎನ್ ಪತ್ರಕರ್ತ ಫರೀದ್ ಜಕಾರಿಯಾ ಬರೆದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವ್ಯಕ್ತಿಚಿತ್ರದ ಪ್ರಕಾರ, ಸ್ವಾತಂತ್ರ್ಯದ ನಂತರ ಭಾರತದ ಮೂವರು ಪ್ರಮುಖ ನಾಯಕರು ಈ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಜವಾಹರಲಾಲ್ ನೆಹರು, ಎರಡು ಇಂದಿರಾ ಗಾಂಧಿ ಮತ್ತು ಮೂರನೇಯದಾಗಿ ನರೇಂದ್ರ ಮೋದಿ ಆಗಿದ್ದಾರೆ. ಈ ಮೂವರು ನಾಯಕರು ರಾಜಕೀಯ ವಲಯದಲ್ಲಿ ಅತ್ಯಂತ ಪ್ರಭಾವಶಾಲಿ ಎನಿಸಿದ್ದಾರೆ, ಎಂದು ಬರೆದುಕೊಂಡಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಕ್ತಿಚಿತ್ರದಲ್ಲಿ "ಭಾರತೀಯ ರಾಜಕೀಯದಲ್ಲಿ ಉಗ್ರತೆಯ ಮುಖ" ಎಂದು ಹೇಳಲಾಗುತ್ತಿದೆ. 66 ವರ್ಷದ ಮಮತಾ ಬ್ಯಾನರ್ಜಿಯವರಿಂದ ತೃಣಮೂಲ ಕಾಂಗ್ರೆಸ್ ಪಕ್ಷ ಬೆಳವಣಿಗೆಯಾಗಿದೆ ಎಂಬ ಅರ್ಥದಲ್ಲಿ ಉಲ್ಲೇಖಿಸಲಾಗಿದೆ.
ಎಸ್ಐಐ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಅದರ್ ಪೂನಾವಾಲಾ
ಟೈಮ್ಸ್ ನಿಯತಕಾಲಿಕೆಯಲ್ಲಿ ಸೀರಂ ಇನ್ಸ್ ಟಿಟ್ಟೂಯ್ ಆಫ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಾಹಕ ಅದರ್ ಪೂನಾವಾಲಾ ಹೆಸರನ್ನು ಉಲ್ಲೇಖಿಸಲಾಗಿದೆ. "ಸಾಂಕ್ರಾಮಿಕ ಪಿಡುಗು ಇಂದಿಗೂ ಅಂತ್ಯವಾಗಿಲ್ಲ, ಪೂನಾವಾಲಾ ಅದನ್ನು ಅಂತ್ಯಗೊಳಿಸುವುದಕ್ಕೆ ಸಹಾಯ ಮಾಡಲಿದ್ದಾರೆ. ಹೆಚ್ಚು ಅಪಾಯಕಾರಿ ರೂಪಾಂತರಗಳ ಅಪಾಯ ಒಳಗೊಂಡಂತೆ ಲಸಿಕೆ ಅಸಮಾನತೆಯು ತೀಕ್ಷ್ಣವಾಗಿದೆ. ಪ್ರಪಂಚದ ಒಂದು ಭಾಗದಲ್ಲಿ ವಿಳಂಬವಾದ ರೋಗನಿರೋಧಕತೆಯು ಜಾಗತಿಕ ಪರಿಣಾಮಗಳನ್ನು ಉಂಟುಮಾಡಬಹುದು." ಎಂದು ಹೇಳಲಾಗಿದೆ.
ಟೈಮ್ಸ್ ನಿಯತಕಾಲಿಕೆ ವಾರ್ಷಿಕ ಪಟ್ಟಿ-2021
2021ನೇ ಸಾಲಿನಲ್ಲಿ ಜಾಗತಿಕ ಮಟ್ಟದ ಪ್ರಮುಖ ನಾಯಕರ ಪಟ್ಟಿಯನ್ನು ಟೈಮ್ಸ್ ನಿಯತಕಾಲಿಕೆ ಪ್ರಕಟಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆದರ್ ಪೂನವಲ್ಲಾ ಹೆಸರು ಪಟ್ಟಿಯಲ್ಲಿದೆ. ಭಾರತೀಯ ನಾಯಕರ ಹೊರತಾಗಿ ಪಟ್ಟಿಯಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೆಸರು ಉಲ್ಲೇಖಿಸಲಾಗಿದೆ.
ತಾಲಿಬಾನ್ ಸಹ-ಸಂಸ್ಥಾಪಕನ ಹೆಸರು ಉಲ್ಲೇಖ
ಟೈಮ್ ನಿಯತಕಾಲಿಕೆಯ '2021 ರ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ' ಪಟ್ಟಿಯಲ್ಲಿ ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರeದಾರ್ ಹೆಸರು ಕಾಣಿಸಿಕೊಂಡಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಫ್ಘಾನಿಸ್ತಾನದಲ್ಲಿ ಮಧ್ಯಕಾಲೀನ ತಾಲಿಬಾನ್ ಆಡಳಿತದ ಮುಖ್ಯಸ್ಥ ಮುಲ್ಲಾ ಅಖುಂದ್ ಅವರಿಗೆ ಬರದಾರ್ ಅವರನ್ನು ಉಪನಾಯಕ ಎಂದು ಹೆಸರಿಸಲಾಗಿದೆ. ಟೈಮ್ ನಿಯತಕಾಲಿಕೆಯ ವಾರ್ಷಿಕ ಪಟ್ಟಿಯಲ್ಲಿ ಇಸ್ರೇಲಿ ಪ್ರಧಾನಿ ನಫ್ತಾಲಿ ಬೆನೆಟ್, ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ, ಅಮೇರಿಕನ್ ರಾಜಕಾರಣಿ ಲಿಜ್ ಚೆನಿ, ಟಿವಿ ನಿರೂಪಕ ಟಕರ್ ಕಾರ್ಲ್ಸನ್ ಮತ್ತು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಸೇರಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments