Select Your Language

Notifications

webdunia
webdunia
webdunia
webdunia

ಪ್ರಧಾನಿಯ ಅಲಿಗಢ ಭೇಟಿ ಸಂದರ್ಭದಲ್ಲಿ ಮರೆತಿರುವ ಭರವಸೆ ನೆನಪಿಸಲಿರುವ ರೈತರು

ಪ್ರಧಾನಿಯ ಅಲಿಗಢ ಭೇಟಿ ಸಂದರ್ಭದಲ್ಲಿ ಮರೆತಿರುವ ಭರವಸೆ ನೆನಪಿಸಲಿರುವ ರೈತರು
ಅಲಿಗಢ , ಮಂಗಳವಾರ, 14 ಸೆಪ್ಟಂಬರ್ 2021 (09:03 IST)
ಅಲಿಗಢ (ಉ.ಪ್ರ),ಸೆ.14 : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾಜಾ ಮಹೇಂದ್ರ ಪ್ರತಾಪ ಸಿಂಗ್ ವಿವಿಯ ಶಿಲಾನ್ಯಾಸವನ್ನು ನೆರವೇರಿಸಲು ಅಲಿಗಢಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ಆಗ್ರಾ ಜಿಲ್ಲೆಯಲ್ಲಿ ಬಟಾಟೆ ಸಂಸ್ಕರಣ ಘಟಕವನ್ನು ಸ್ಥಾಪಿಸುವುದಾಗಿ ನೀಡಿದ್ದ ಭರವಸೆ ಇನ್ನೂ ಬಾಕಿಯಿದ್ದು, ಅದನ್ನು ಪ್ರಧಾನಿಯವರಿಗೆ ನೆನಪಿಸಲು ಜಿಲ್ಲೆಯಾದ್ಯಂತದಿಂದ 5,000ಕ್ಕೂ ಅಧಿಕ ರೈತರು ಅವರ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎಂದು ಭಾರತೀಯ ಕಿಸಾನ ಯೂನಿಯನ್ (ಬಿಕೆಯು) ಸೋಮವಾರ ತಿಳಿಸಿದೆ.

ಮಂಗಳವಾರ ಬೆಳಗಿನ ಜಾವ ಖಾಸಗಿ ವಾಹನಗಳು ಮತ್ತು ಸರಕಾರಿ ಬಸ್ಗಳಲ್ಲಿ ತಾವು ಅಲಿಗಢಕ್ಕೆ ಪ್ರಯಾಣಿಸಲಿದ್ದೇವೆ. ಪ್ರಧಾನಿಯವರ ಕಾರ್ಯಕ್ರಮದಲ್ಲಿ ಯಾವುದೇ ಪ್ರತಿಭಟನೆಯನ್ನು ನಡೆಸುವುದಿಲ್ಲ,ಆದರೆ ಪೋಸ್ಟರ್ ಗಳ ಮೂಲಕ ತಮ್ಮ ಬೇಡಿಕೆಗಳನ್ನು ಪ್ರಮುಖವಾಗಿ ಬಿಂಬಿಸುತ್ತೇವೆ ಎಂದು ರೈತರು ಹೇಳಿದ್ದಾರೆ.
ಮೋದಿ ಸರಕಾರವು ಏಳು ವರ್ಷಗಳ ಅಧಿಕಾರವನ್ನು ಪೂರೈಸಿದೆ,ಆದರೆ 2014ರ ಲೋಕಸಭಾ ಚುನಾವಣೆಗಳ ಸಂದರ್ಭ ಭರವಸೆ ನೀಡಿದ್ದ ಬಟಾಟೆ ಸಂಸ್ಕರಣೆ ಘಟಕ ಈಗಲೂ ಕನಸಾಗಿಯೇ ಉಳಿದಿದೆ ಎಂದು ಬಿಕೆಯು ಜಿಲ್ಲಾಧ್ಯಕ್ಷ ರಾಜವೀರ ಲವಾನಿಯಾ ಹೇಳಿದರು.
'ನಾವು ಪ್ರಧಾನಿಯವರನ್ನು ನಂಬಿದ್ದೆವು ಮತ್ತು ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ರೈತರು ಬಿಜೆಪಿಗೆ ಮತಗಳನ್ನು ನೀಡಿದ್ದರು. ಪ್ರತಿಫಲವಾಗಿ ನಮಗೇನೂ ಸಿಕ್ಕಿಲ್ಲ 'ಎಂದು ಬಿಕೆಯು ಮಹಿಳಾ ಘಟಕದ ನಾಯಕಿ ಸಾವಿತ್ರಿ ಚಹಾರ್ ತಿಳಿಸಿದರು.
ಆಗ್ರಾದಲ್ಲಿ ಬಟಾಟೆ ಸಂಸ್ಕರಣ ಘಟಕ ಸ್ಥಾಪನೆಯು ರೈತರ ಆದಾಯಕ್ಕೆ ಪೂರಕವಾಗುತ್ತದೆ ಮತ್ತು ಸ್ಥಳೀಯ ಮಟ್ಟದಲ್ಲಿ ವಿವಿಧ ಬಟಾಟೆ ಉತ್ಪನ್ನಗಳ ತಯಾರಿಕೆ ಸಾಧ್ಯವಾಗುತ್ತದೆ. ರೈತರು ತಾವು ಬೆಳೆದ ಬಟಾಟೆಗಳನ್ನು ದೀರ್ಘಾವಧಿಗೆ ಶೈತ್ಯಾಗಾರಗಳಲ್ಲಿ ಸಂರಕ್ಷಿಸಬೇಕಿಲ್ಲ. ಘಟಕವು ಉದ್ಯೋಗಾವಕಾಶಗಳನ್ನೂ ಹೆಚ್ಚಿಸುತ್ತದೆ ಎನ್ನುವುದು ರೈತ ಸಮುದಾಯದ ಅಭಿಪ್ರಾಯವಾಗಿದೆ.
ಆಗ್ರಾ ಉತ್ತರ ಭಾರತದಲ್ಲಿಯೇ ಅತ್ಯಂತ ಹೆಚ್ಚು ಬಟಾಟೆ ಬೆಳೆಯುವ ಜಿಲ್ಲೆಯಾಗಿದೆ.
ಸಂಸ್ಕರಣ ಘಟಕದ ಜೊತೆಗೆ ಶೈತ್ಯಾಗಾರ ಶುಲ್ಕಗಳ ಮೇಲೆ ಸಬ್ಸಿಡಿಗಾಗಿಯೂ ರೈತರು ಅಲಿಗಢ ರ್ಯಾಲಿಯಲ್ಲಿ ಬೇಡಿಕೆಯನ್ನು ಮಂಡಿಸಲಿದ್ದಾರೆ. ಪ್ರಸ್ತುತ ಆಗ್ರಾ ಜಿಲ್ಲೆಯಲ್ಲಿ ಒಟ್ಟು 25 ಲ.ಮೆ.ಟ.ಗೂ ಹೆಚ್ಚಿನ ಸಾಮರ್ಥ್ಯದ 270 ಶೈತ್ಯಾಗಾರಗಳಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣುಮಗು ಜನಿಸಿದ್ದಕ್ಕೆ ಉಚಿತವಾಗಿ 40,000 ರೂ. ಪಾನಿಪುರಿ ವಿತರಣೆ