Publish Date: Tue, 05 Jun 2018 (12:13 IST)
Updated Date: Tue, 05 Jun 2018 (12:15 IST)
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ಜೆಡಿಎಸ್ ನಲ್ಲೂ ಅಸಮಾಧಾನದ ಹೊಗೆ ಜೋರಾಗಿದೆ. ಎಂಎಲ್ ಸಿ ಬಸವರಾಜ ಹೊರಟ್ಟಿ ಪಕ್ಷದ ವರಿಷ್ಠರ ನಡೆಗೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ನಿನ್ನೆ ನಡೆದ ಜೆಡಿಎಸ್ ಸಭೆಗೆ ವಿಧಾನ ಪರಿಷತ್ ಸದಸ್ಯರನ್ನು ದೂರವಿಡಲಾಗಿತ್ತು. ಅಲ್ಲದೆ, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಬಸವರಾಜ ಹೊರಟ್ಟಿಗೆ ಸಭಾಪತಿ ಸ್ಥಾನ ಕೊಟ್ಟು ಸಮಾಧಾನಿಸುವ ಯತ್ನ ನಡೆಸಲಾಗಿತ್ತು.
ಈ ಹಿನ್ನಲೆಯಲ್ಲಿ ಹೊರಟ್ಟಿ ಸಿಟ್ಟಿಗೆದ್ದಿದ್ದು, ಯಾರನ್ನು ಬೇಕಾದರೂ ಸಚಿವರನ್ನಾಗಿ ಮಾಡಲಿ ನಂಗೇನು? ಸಚಿವ ಸ್ಥಾನ ಕೊಡದಿರುವುದಕ್ಕೆ ಸಭಾಪತಿ ಸ್ಥಾನ ಕೊಟ್ಟು ನನ್ನನ್ನು ಸಮಾಧಾನಿಸುವುದು ಬೇಕಾಗಿಲ್ಲ ಎಂದು ಹೊರಟ್ಟಿ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.