Select Your Language

Notifications

webdunia
webdunia
webdunia
webdunia

11 ಸುತ್ತಿನ ಬಳಿಕ 34000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ ಮಮತಾ ಬ್ಯಾನರ್ಜಿ

11 ಸುತ್ತಿನ ಬಳಿಕ 34000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ ಮಮತಾ ಬ್ಯಾನರ್ಜಿ
ಕೋಲ್ಕತ್ತಾ , ಭಾನುವಾರ, 3 ಅಕ್ಟೋಬರ್ 2021 (12:44 IST)
ಕೋಲ್ಕತ್ತಾ : ಬಂಗಾಳ ಉಪ ಚುನಾವಣೆಯಲ್ಲಿ ಮೊದಲ ಸುತ್ತಿನ ಮತ ಎಣಿಕೆಯ ನಂತರ ಟಿಎಂಸಿ ಎಲ್ಲಾ ಮೂರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಭಬಾನಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಮುನ್ನಡೆ ಸಾಧಿಸಿದ್ದಾರೆ.

ನಂದಿಗ್ರಾಮದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರಿಗೆ ಸವಾಲು ಹಾಕಿದ ನಂತರ ವಿಧಾನಸಭಾ ಚುನಾವಣೆಯಲ್ಲಿ ಸೋತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಭಬಾನಿಪುರದಿಂದ ಮರು ಆಯ್ಕೆ ಬಯಸುತ್ತಿದ್ದಾರೆ.
ಭಾಬಾನಿಪುರ ಗುರುವಾರ ಮತ ಚಲಾಯಿಸುತ್ತಿದ್ದಂತೆ, ಕೋಲ್ಕತ್ತಾ ಸ್ಥಾನವು ಟಿ.ಎಂ.ಸಿ ಮತ್ತು ಬಿಜೆಪಿ ಶಿಬಿರಗಳ ನಡುವಿನ ಉದ್ವಿಗ್ನತೆಯ ನಡುವೆ 57% ಮತದಾನವನ್ನು ದಾಖಲಿಸಿದೆ. ಭಬಾನಿಪುರ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಪ್ರಿಯಾಂಕಾ ಟಿಬ್ರೂವಾಲ್ ಮತ್ತು ಸಿಪಿಐಎಂನ ಶ್ರೀಜೀಬ್ ಬಿವಾಸ್ ವಿರುದ್ಧ ಸ್ಪರ್ಧಿಸಿದ್ದಾರೆ. ಏತನ್ಮಧ್ಯೆ, ಮುರ್ಷಿದಾಬಾದ್ ನ ಸಂಸೆರ್ ಗಂಜ್ ಮತ್ತು ಜಂಗೀಪುರ್ ಸ್ಥಾನಗಳಲ್ಲಿ ಉಪಚುನಾವಣೆಗಳು ನಡೆದವು ಮತ್ತು ಅದರಲ್ಲಿ ತಲಾ 77% ಕ್ಕಿಂತ ಹೆಚ್ಚಿನ ಮತದಾನವಾಗಿದೆ.
ಇದೀಗ ಮತ ಎಣಿಕೆಯ 11 ನೇ ಸುತ್ತಿನ ನಂತರ, ಮಮತಾ ಬ್ಯಾನರ್ಜಿ34000 ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮಮತಾ ಬ್ಯಾನರ್ಜಿ 45894 ಮತಗಳನ್ನು ಗಳಿಸಿದ್ದಾರೆ, ಪ್ರಿಯಾಂಕಾ ಟಿಬ್ರೂವಾಲ್ 11894 ಮತಗಳನ್ನು ಗಳಿಸಿದ್ದಾರೆ ಮತ್ತು ಸಿ.ಪಿ.ಐ.ಎಂ ಅಭ್ಯರ್ಥಿ ಕೇವಲ 1515 ಮತಗಳನ್ನು ಗಳಿಸಿದ್ದಾರ


Share this Story:

Follow Webdunia kannada

ಮುಂದಿನ ಸುದ್ದಿ

ಹಾನಗಲ್-ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ : ಬೊಮ್ಮಾಯಿ ವಿಶ್ವಾಸ