ರಾಜಕೀಯ ಲಾಭಕ್ಕೆ ಮಾಡುವ ಯೋಜನೆಗಳ ಆಯಸ್ಸು ಸ್ವಲ್ಪ ದಿನ ಮಾತ್ರ : ಬೊಮ್ಮಾಯಿ

Webdunia
ಮಂಗಳವಾರ, 5 ಸೆಪ್ಟಂಬರ್ 2023 (09:04 IST)
ಬೆಂಗಳೂರು : ಉಚಿತ ಯೋಜನೆಗಳು ರಾಜಕೀಯ ಲಾಭಕ್ಕೆ ಮಾಡೋ ಯೋಜನೆಗಳು. ಈ ಯೋಜನೆಯ ಆಯಸ್ಸು ಸ್ವಲ್ಪ ದಿನ ಮಾತ್ರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಉಚಿತ ಯೋಜನೆಗಳ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಉಚಿತ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಅವರ ಹೇಳಿಕೆ ಸಮರ್ಥನೆ ಮಾಡಿಕೊಂಡ ಅವರು, ಪ್ರತಿಯೊಬ್ಬ ನಾಗರಿಕರ ಆದಾಯ ಹೆಚ್ಚಾಗಬೇಕು. ಉದ್ಯೋಗ ಸಿಗಬೇಕು. ಆರ್ಥಿಕತೆ ಹೆಚ್ಚಾಗಬೇಕು, ಕೊಳ್ಳುವ ಪವರ್ ಹೆಚ್ಚಾಗಬೇಕು.

ಆಗ ದೇಶ ಅಭಿವೃದ್ಧಿ ಆಗುತ್ತದೆ ಎಂದು ಮೋದಿ ಹೇಳಿದ್ದಾರೆ. ಉಚಿತ ಯೋಜನೆಗಳು ಅಲ್ಪ ಕಾಲದ ಯೋಜನೆಗಳು. ಇವು ಸ್ವಲ್ಪ ದಿನ ಆದ ಮೇಲೆ ಲಾಭ ಕೊಡುವುದಿಲ್ಲ. ಇದನ್ನು ರಾಜಕೀಯ ಲಾಭಕ್ಕೆ ಮಾಡುತ್ತಾರೆ. ಇದನ್ನೇ ಮೋದಿ ಅವರು ಹೇಳಿದ್ದಾರೆ ಎಂದರು. 

ಇನ್ನು ಅನ್ನಭಾಗ್ಯ ಯೋಜನೆಯಡಿ 35 ಲಕ್ಷ ಫಲಾನುಭವಿಗಳಿಗೆ ಹಣ ಹಾಕದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು. ಕುಂಟು ನೆಪ ಹೇಳಿ ಅನೇಕರನ್ನು ದೂರ ಇಡುತ್ತಾರೆ ಎಂದು ನಾನು ಅವತ್ತೇ ಹೇಳಿದ್ದೆ. ಈಗ ಅದನ್ನೆ ಮಾಡಿದ್ದಾರೆ.

ಕೇಂದ್ರ ಕೊಡುತ್ತಿರುವ 5 ಕೆಜಿ ಅಕ್ಕಿ ಕೂಡಾ ಕಡಿಮೆ ಮಾಡಿದ್ದಾರೆ. 3 ಕೆಜಿ ಅಕ್ಕಿ ಕೊಟ್ಟು ಉಳಿದದ್ದು ಜೋಳ, ರಾಗಿ ಕೊಡುವ ಕೆಲಸ ಮಾಡುತ್ತಿದ್ದಾರೆ. 5 ಕೆಜಿಗೆ ಕೊಡುತ್ತಿರುವ ಹಣ ಸರಿಯಾಗಿ ಕೊಡುತ್ತಿಲ್ಲ. 35 ಲಕ್ಷ ಜನರನ್ನು ಹೊರಗೆ ಇಟ್ಟಿದ್ದಾರೆ. ತಾಂತ್ರಿಕ ಕಾರಣ ಎನ್ನುತ್ತಾರೆ ಎಂದು ಕಿಡಿಕಾರಿದರು.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಲವು ಮಕ್ಕಳ ಕಣ್ಣಿಗೆ ಗಾಯ ಬೆನ್ನಲ್ಲೇ 59 ಕಾರ್ಬೈಡ್ ಗನ್ ವಶಕ್ಕೆ, ಇಬ್ಬರು ಅರೆಸ್ಟ್‌

ಕರ್ನೂಲ್ ಭೀಕರ ಬಸ್ ಬೆಂಕಿ ಅವಘಡ, ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಸಲಹೆ ಹೀಗಿದೆ

ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರ: ಅಂಗೈಯಲ್ಲಿ ಡೆತ್‌ನೋಟ್ ಬರೆದಿಟ್ಟು ವೈದ್ಯೆ ಸೂಸೈಡ್

ನನ್ನನ್ನು ಕತ್ತಲಲ್ಲಿ ಯಾಕೆ ಹುಡುಕ್ತೀಯಾ, ನಾನು ಹಾಗಲ್ಲ: ಪ್ರದೀಪ್ ಈಶ್ವರ್

ರಾಷ್ಟ್ರ ರಾಜಧಾನಿಯಲ್ಲಿ ಗಾಳಿ ಗುಣಮಟ್ಟ ಕಳಪೆ: ದೆಹಲಿಯಲ್ಲಿ ಈ ವ್ಯಾಪಾರದಲ್ಲಿ ಭಾರೀ ಏರಿಕೆ

ಮುಂದಿನ ಸುದ್ದಿ
Show comments