ಜಾಗತಿಕ ಮಟ್ಟದಲ್ಲಿ ಆವರಿಸಿರುವ ವಿದ್ಯುತ್ ಕೊರತೆ, ಈ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಿದೆ. ಭಾರತ, ಚೀನಾದಂಥ ಅಭಿವೃದ್ಧಿಶೀಲ ರಾಷ್ಟ್ರಗಳು ಮಾತ್ರವಲ್ಲ ಅಮೆರಿಕ, ಯು.ಕೆ.ಯಂಥ ಅಭಿವೃದ್ಧಿಗೊಂಡ ರಾಷ್ಟ್ರಗಳಿಗೂ ಇದು ದೊಡ್ಡ ಕೊರತೆಯಾಗಿ ಕಾಡುತ್ತಿದೆ.
ಮೂಲಕಾರಣವೇನು? ಕೋವಿಡ್ ಕಾರಣದಿಂದಾಗಿ, ಕಚ್ಚಾ ತೈಲ ಹಾಗೂ ಇತರ ಇಂಧನ ಮೂಲಗಳಿಗೆ ಇದ್ದ ಬೇಡಿಕೆ ಜಾಗತಿಕ ಮಟ್ಟದಲ್ಲಿ ಅಗಾಧವಾಗಿ ಕುಸಿಯಿತು. ಈಗ ಜಾಗತಿಕ ಉತ್ಪಾದನಾ ಕ್ಷೇತ್ರ ಪುಟಿದೆದ್ದಿರುವ ಹಿನ್ನೆಲೆಯಲ್ಲಿ, ಈ ಬೇಡಿಕೆ ಹಿಂದೆ ಇದ್ದ ಬೇಡಿಕೆಗಿಂತ ಹತ್ತಾರು ಪಟ್ಟು ಹೆಚ್ಚಾಗಿದೆ. ಹೀಗೆ, ಹಠಾತ್ ಆಗಿ ಏರಿದ ಬೇಡಿಕೆ ಹಾಗೂ ಅದಕ್ಕೆ ಸರಿಸಮನಾಗಿ ಉತ್ಪಾದನೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ದೊಡ್ಡಮಟ್ಟದ ಕೊರತೆ ಏರ್ಪಟ್ಟಿದೆ.
ಕಲ್ಲಿದ್ದಲು ಕೊರತೆ ಕಲ್ಲಿದ್ದಲು ಕೊರತೆ ಕಳೆದ ವರ್ಷದಲ್ಲಿದ್ದ ಬೆಲೆಗಿಂತ ದುಪ್ಪಟ್ಟಾಗಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 5,990 ರೂ.ಗಳಿಗೆ ಏರಿದೆ. ಜಾಗ ತಿಕ ತಾಪಮಾನ ದುಷ್ಪರಿಣಾಮ ದಿಂದಾಗಿ ಭಾರತ ಮತ್ತು ಚೀನಾದಲ್ಲಿ ಅಗಾಧವಾಗಿ ಮಳೆ ಸುರಿಯುತ್ತಿರುವ ಕಾರಣ, ಕಲ್ಲಿದ್ದಲು ಗಣಿಗಾರಿಕೆಗೆ ಅಡಚಣೆಯುಂಟಾಗಿದೆ.