ರಾಜ್ಯದಲ್ಲಿ ಮತ್ತೆ ಕೋವಿಡ್ ಏರಿಕೆ!

Webdunia
ಶುಕ್ರವಾರ, 17 ಜೂನ್ 2022 (07:06 IST)
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಏರುಗತಿಯಲ್ಲಿ ಸಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟವಾಗಿದೆ. ಸರ್ಕಾರ ಪ್ರಕಟ ಮಾಡಿರೋ ಮಾರ್ಗಸೂಚಿಯಲ್ಲಿ ಏನಿದೆ? ಜನ ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ.

ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಬೇಕು. ಹೊರ ದೇಶದಿಂದ ಬರುವವರಿಗೆ ರ್ಯಾಂಡಮ್ ಸ್ಕ್ರೀನಿಂಗ್ ಮಾಡಬೇಕು ಮತ್ತು ಆರ್ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದೆ. ಪಾಸಿಟಿವ್ ಆದ ಎಲ್ಲಾ ಸ್ವಾಬ್ಗಳನ್ನು ಜಿನೋಮ್ ಸೀಕ್ವೆನ್ಸಿಂಗ್ಗಾಗಿ ರವಾನೆ ಮಾಡಬೇಕು. 

ಪಾಸಿಟಿವ್ ಆಗಿದ್ರೆ ಅಥವಾ ರಿಪೋರ್ಟ್ ಬರುವವದಿದ್ದರೆ, ವ್ಯಕ್ತಿಯನ್ನ ಕ್ವಾರಂಟೈನ್ ಮಾಡಬೇಕು. ಕ್ವಾರಂಟೈನ್ ಅವಧಿ ಮುಗಿಯುವವರೆಗೂ ವೈದ್ಯರು ನಿಗಾ ಇಡಬೇಕು. ಎಲ್ಲಾ ಐಎಲ್ಐ ಸ್ಯಾರಿ ಕೇಸ್ಗಳ ಡೇಟಾವನ್ನು ಐಡಿಎಸ್ನಲ್ಲಿ ಅಪ್ಲೋಡ್ ಮಾಡಬೇಕು. ಆಸ್ಪತ್ರೆಗಳಿಗೆ ಐಎಲ್ಐ ಕೇಸ್ಗಳು ದಾಖಲಾದರೆ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಬೇಕು.

ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳು ತಂಡ ರಚನೆ ಮಾಡಿಕೊಂಡು ಸೆರೋ ಸರ್ವೆ ಮಾಡಲು ಸೂಚನೆ ನೀಡಲಾಗಿದೆ. 6 ರಿಂದ 14 ವರ್ಷದ ಮಕ್ಕಳಿಗೆ ರೋಗನಿರೋಧಕ ಶಕ್ತಿ ಹೇಗಿದೆ. ಈಗಾಗಲೇ ಕೋವಿಡ್ ಬಂದು ಹೋಗಿದೆಯಾ ಹೇಗೆ ಅಂತಾ ಸೆರೋ ಸರ್ವೆ ಮಾಡಲು ಸರ್ಕಾರ ನಿರ್ಧರಿಸಿದ್ದು, ನಿಗದಿತ ಸಮಯದಲ್ಲಿ ಸೆರೋ ಸರ್ವೆ ಮಾಡಲು ಸೂಚನೆ ನೀಡಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಳ್ಳಾರಿ ಗಲಭೆ ಪ್ರಕರಣ, ಎಚ್‌ಡಿಕೆ ಆರೋಪಕ್ಕೆ ಪರಮೇಶ್ವರ್ ಪ್ರತಿಕ್ರಿಯೆ ಹೀಗಿತ್ತು

ಶಾಲಾ ಕಾಲೇಜು ಬೆನ್ನಲ್ಲೇ ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿಗೆ ಬಾಂಬ್‌ ಬೆದರಿಕೆ ಮೇಲ್

ದೀರ್ಘಕಾಲದ ಸಿಎಂ ಸಿದ್ದರಾಮಯ್ಯ ರಾಜ್ಯಕ್ಕೆ ನೀಡಿದ ಕೊಡುಗೆಯೇನು: ಬಿವೈ ವಿಜಯೇಂದ್ರ

ಬಳ್ಳಾರಿ ಶೂಟೌಟ್‌ನಲ್ಲಿ ಹತ್ಯೆಯಾದ ಕಾರ್ಯಕರ್ತನಿಗೆ ಪರಿಹಾರ ನೀಡಿ ಸಂಕಷ್ಟಕ್ಕೊಳಗಾದ ಜಮೀರ್, ಏನಿದು

ಗೋರಖ್‌ಪುರದಿಂದ ಮುಂಬೈಗ್ ಹೋಗುತ್ತಿದ್ದ ಕಾಶಿ ಎಕ್ಸ್‌ಪ್ರೆಸ್‌ ರೈಲಿಗೆ ಬಾಂಬ್ ಬೆದರಿಕೆ, ಮುಂದೇನಾಯ್ತು ಗೊತ್ತಾ

ಮುಂದಿನ ಸುದ್ದಿ
Show comments