Select Your Language

Notifications

webdunia
webdunia
webdunia
webdunia

ಕೇರಳ ಮಳೆಗೆ ಕೊಚ್ಚಿ ವಿಮಾನ ನಿಲ್ದಾಣದ ಪಾಡು ಹೇಳ ತೀರದು!

ಕೇರಳ ಮಳೆಗೆ ಕೊಚ್ಚಿ ವಿಮಾನ ನಿಲ್ದಾಣದ ಪಾಡು ಹೇಳ ತೀರದು!
ಕೊಚ್ಚಿ , ಗುರುವಾರ, 16 ಆಗಸ್ಟ್ 2018 (08:23 IST)
ಕೊಚ್ಚಿ: ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಇಲ್ಲಿನ ಪ್ರಮುಖ ವಿಮಾನ ನಿಲ್ದಾಣಕ್ಕೂ ನೀರು ನುಗ್ಗಿದೆ. ಭಾರೀ ಮಳೆಯಿಂದಾಗಿ ವಿಮಾನ ನಿಲ್ದಾಣ ನಾಲ್ಕು ದಿನಗಳವರೆಗೆ ಬಂದ್ ಆಗಲಿದೆ.

ಮುಂದಿನ ನಾಲ್ಕು ದಿನಗಳವರೆಗೆ ವಿಮಾನ ಸಂಚಾರವೂ ರದ್ದಾಗಿದೆ. ಮಳೆಯಿಂದಾಗಿ ಕೇರಳದಲ್ಲಿ ಸಾವನ್ನಪ್ಪಿದವರ ಸಂಖ್ಯೆ 67 ಕ್ಕೇರಿದ್ದು, ಇನ್ನೂ ಭಾರೀ ಮಳೆಯಾಗುತ್ತಿರುವುದರಿಂದ ಸಾವು ನೋವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.

webdunia
ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ನೆರೆಯ ವಾತಾವರಣವಿದ್ದು, ವಿಮಾನ ನಿಲ್ದಾಣ ಈ ರೀತಿ ನಾಲ್ಕು ದಿನಗಳವರೆಗೆ ಬಂದ್ ಆಗುತ್ತಿರುವುದು ಇದೇ ಮೊದಲಾಗಿದೆ. ಇಂದಿನಿಂದಲೇ ಇಲ್ಲಿಂದ ಹಾರಾಡಬೇಕಿದ್ದ ವಿಮಾನಗಳೆಲ್ಲಾ ರದ್ದಾಗಿವೆ.





ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಗಂಭೀರ