Publish Date: Wed, 28 Mar 2018 (18:49 IST)
Updated Date: Wed, 28 Mar 2018 (18:52 IST)
ನೈರುತ್ಯ ಪದವೀದರರ ಜೆ.ಡಿ.ಎಸ್ ಅಭ್ಯರ್ಥಿ ಬೋಜೆ ಗೌಡರಿಂದ ಭೋಜನ ಕೂಟ ಏರ್ಪಡಿಸಲಾಗಿತ್ತು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿ ನಾಲ್ಕು ಜಿಲ್ಲೆಯ ಉಪನ್ಯಾಸಕರಿಗೆ ಭೋಜನ ಕೂಟವನ್ನು ಬೋಜೆ ಗೌಡ ಆಯೋಜಿಸಿದ್ದರು.
ಶಿವಮೊಗ್ಗ ನಗರದ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿರುವ ಭೋಜನ ಕೂಟದ ಸ್ಥಳಕ್ಕೆ ಮಾಧ್ಯಮದವರು ತೆರಳಿ ಚಿತ್ರಿಕರಣ ಮಾಡಿಕೊಳ್ಳುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳದಿಂದ ಜೆಡಿಎಸ್ ಅಭ್ಯರ್ಥಿ ಬೋಜೆಗೌಡ ಕಾಲ್ಕಿತ್ತ ಘಟನೆ ನಡೆದಿದೆ.
ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ ಕೆಲ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
jagadish
Publish Date: Wed, 28 Mar 2018 (18:49 IST)
Updated Date: Wed, 28 Mar 2018 (18:52 IST)