Daily Horoscope
✕

ಜೆಡಿಎಸ್ ವಿರುದ್ಧವಾಗಿ ಭವಿಷ್ಯ ನುಡಿದ ಜಮೀರ್ ಅಹ್ಮದ್

Webdunia
ಮಂಗಳವಾರ, 10 ಏಪ್ರಿಲ್ 2018 (16:00 IST)
ಚಿತ್ರದುರ್ಗ : ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ 115 ಸೀಟು ಗೆದ್ದರೆ ನಮ್ಮ ತಾಯಾಣೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುವುದರ ಜೊತೆಗೆ ರಾಜ್ಯ ಬಿಟ್ಟು ಹೋಗುತ್ತೇನೆ ಎಂದು ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ಜಮೀರ್ ಅಹ್ಮದ್ ಅವರು ಹೇಳಿದ್ದಾರೆ.


ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು,’ ನಮ್ಮಪ್ಪಾನಾಣೆ ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲ್ಲ. ಜೆಡಿಎಸ್ ಪಕ್ಷ ಸೆಕ್ಯೂಲರ್ ಅಲ್ಲವೇ ಅಲ್ಲ. ಕುಮಾರಸ್ವಾಮಿ ಅವರಲ್ಲಿ ಶೇ. 10 ರಷ್ಟು ಜಾತ್ಯಾತೀತ ಅಂಶಗಳಿಲ್ಲ. ಈ ಚುನಾವಣೆಯಲ್ಲಿ ಏನಾದ್ರೂ ಜೆಡಿಎಸ್ 115 ಸೀಟು ಗೆದ್ದರೆ ನಮ್ಮ ತಾಯಾಣೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುವುದರ ಜೊತೆಗೆ ರಾಜ್ಯ ಬಿಟ್ಟು ಹೋಗುತ್ತೇನೆ. ಜೆಡಿಎಸ್ 20-30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎಂಬುದು ಕುಮಾರಸ್ವಾಮಿ ಅವರಿಗೆ ಗೊತ್ತಿದೆ. ಸಿದ್ದರಾಮಯ್ಯ ಅವರಿಗೆ ಹಿಂದೆ ಹೋಗುವುದು ಗೊತ್ತಿಲ್ಲ. ಭಯ ಬಂದಿರುವುದು ಕುಮಾರಸ್ವಾಮಿ ಅವರಿಗೆ, ಹೀಗಾಗಿ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿಯಲ್ಲಿ ಯಾರನ್ನೋ ಮೆಚ್ಚಿಸಲು ಎಸ್.ಐ.ಆರ್ ಪ್ರಕ್ರಿಯೆ ವಿರುದ್ಧ ಸಿಎಂ ಮಾತು: ಅಶ್ವಥ್ ನಾರಾಯಣ

ಭಾರತೀಯ ಮೂಲದ ನವಿ ಪಿಳ್ಳೈಗೆ ಒಲಿದ 2026ರ ನೋಬೆಲ್ ಶಾಂತಿ ಪ್ರಶಸ್ತಿ

ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಎದುರಾಗಿದೆ: ಬಿ.ವೈ.ವಿಜಯೇಂದ್ರ

ಸಿಇಸಿ ವಿರುದ್ಧ ಪ್ರತಿಭಟನೆಗೆ ಯತ್ನ: ಕಾಕ್ರೋಚ್ ಜನತಾ ಪಾರ್ಟಿಗೆ ಪೊಲೀಸರಿಂದ ಬಿಗ್ ಶಾಕ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments